ಜಮೀನಿಗೆ ನುಗ್ಗಿದ ನೀರು; ಜಲಾವೃತ

ಬುಧವಾರ, ಜೂಲೈ 17, 2019
24 °C

ಜಮೀನಿಗೆ ನುಗ್ಗಿದ ನೀರು; ಜಲಾವೃತ

Published:
Updated:

ಪಾಂಡವಪುರ:  ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರನ್ನು ಬಿಡಲಾಗಿದ್ದು, ಈ ನಾಲೆಯಿಂದ ಶಿಥಿಲಗೊಂಡಿದ್ದ ಸೀಳು ನಾಲೆಗಳಿಗೆ ನೀರನ್ನು ಹರಿಯುತ್ತಿದ್ದು ರೈತರ ಜಮೀನಿನಲ್ಲಿದ್ದ ಸುಮಾರು 5 ಎಕರೆ ಬೆಳೆ ಹಾಗೂ ಬಿತ್ತನೆ ಬೀಜ ಹಾಕಲು ಹದಗೊಳಿಸಿದ್ದ ಸುಮಾರು 5 ಎಕರೆ ಜಲಾವೃತಗೊಂಡಿದೆ.ಪಟ್ಟಣದ ಹಿರೋಡೆ ಸರ್ವೆ ನಂ: 50ರಲ್ಲಿರುವ ಹಾರೋಹಳ್ಳಿ ಗ್ರಾಮದ ಎಚ್.ಎನ್. ಮಂಜುನಾಥ್, ದೇವೇಗೌಡ, ಕುಮಾರ್ ಹಾಗೂ ಇನ್ನಿತರರ ಜಮೀನಿನ ನೀರಿನ ಕೊರೆತಕ್ಕೆ ಸಿಕ್ಕಿ ಹಾಳಾಗಿದೆ.ಕೆಆರ್‌ಎಸ್‌ನಿಂದ  ವಿಶ್ವೇಶ್ವರಯ್ಯ ನಾಲೆಗಳಿಗೆ ನೀರು ಬಿಡುವ ಹಿಂದಿನ ದಿನ ಕಾವೇರಿ ನೀರಾವರಿ ನಿಗಮದ ನಂ.3 (ನೀರಾವರಿ ಇಲಾಖೆ) ಎಂಜಿನಿಯರ್‌ಗಳು ತರಾತುರಿಯಲ್ಲಿ  ಶಿಥಿಲಗೊಂಡಿದ್ದ ಸೀಳು ನಾಲೆಗಳನ್ನು ದುರಸ್ಥಿ ಮಾಡಿದ್ದಾರೆ. ದುರಸ್ಥಿ ಮಾಡುವ ಸಂದರ್ಭದಲ್ಲಿ ತಡೆಗೋಡೆಗಳನ್ನು ಸ್ವಲ್ಪ ಎತ್ತರಕ್ಕೆ ಎತ್ತರಿಸಬೇಕಾಗಿತ್ತು. ಇಲ್ಲದಿದ್ದರೆ ತೂಬಿನ ಮೂಲಕ ಸೀಳು ನಾಲೆಗಳಿಗೆ ನೀರು ಹರಿಸುವಾಗ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಿಡಬೇಕಾಗಿತ್ತು. ಆದರೆ ಇವನ್ನು  ಎಂಜಿನಯರ್‌ಗಳು ಗಮನಕ್ಕೆ ತೆಗೆದುಕೊಳ್ಳದರಿಂದ ಜಮೀನು ಹಾಳಾಗಿ ಹೋಗಲು ಕಾರಣವಾಗಿದೆ ಎಂದು ರೈತರು ದೂರಿದ್ದಾರೆ. ರೈತ ಮುಖಂಡರಾದ ಬಿ.ಟಿ. ಮಂಜುನಾಥ್, ಎಲೆಕೆರೆ ಚಂದ್ರು, ಕೆನ್ನಾಳು ನಾಗರಾಜು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry