ಶನಿವಾರ, ಏಪ್ರಿಲ್ 17, 2021
32 °C

ಜಮೀನು ಅತಿಕ್ರಮಣಕ್ಕೆ ಸಂಚು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಇಲ್ಲಿನ ದೇವನಾಯಕನಹಳ್ಳಿಯ ಹುಚ್ಚಲಿಂಗೇಶ್ವರಸ್ವಾಮಿ ಮಠದ ಪಕ್ಕದಲ್ಲಿನ ತಮಗೆ ಸೇರಿದ 4 ಗುಂಟೆ ಜಾಗವನ್ನು ಟಿಎಪಿಸಿಎಂಎಸ್ ಕಾರ್ಯದರ್ಶಿ ಮುರುಗೇಶಪ್ಪ ಅತಿಕ್ರಮಣ ಮಾಡಲು ಸಂಚು ನಡೆಸಿದ್ದಾರೆ ಎಂದು ಜಾಗದ ಮಾಲೀಕ ಹಾಗೂ ಭಾರತೀಯ ರಂಗಭೂಮಿ ಸೇನೆಯ ನಿರ್ದೇಶಕ ಎಚ್.ಸಿ. ಚಿದಾನಂದಮೂರ್ತಿ ಆರೋಪಿಸಿದರು.

ತಮ್ಮ ಪೂರ್ವಜರು ಈಗ ಟಿಎಪಿಸಿಎಂಎಸ್ ಇರುವ 2.20 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು, ಆದರೆ, ಈಗ ಟಿಎಪಿಸಿಎಂಎಸ್ ಕಾರ್ಯದರ್ಶಿ ಮುರುಗೇಶಪ್ಪ ಅವರೇ ಜಾಗ ಅತಿಕ್ರಮಣ ಮಾಡಲು ಹೊರಟಿರುವುದು ವಿಪರ್ಯಾಸ ಎಂದು  ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

 

4 ಗುಂಟೆ ಜಾಗದಲ್ಲಿ ಯಾರಿಗೂ ಗೊತ್ತಾಗದಂತೆ ರಾತ್ರೋರಾತ್ರಿ ಒಂದು ಪೆಟ್ಟಿಗೆ ಅಂಗಡಿ ತಂದು ಇಟ್ಟಿದ್ದಾರೆ. ಅದನ್ನು ಪ್ರಶ್ನಿಸಿದರೆ ಜಾಗದ ದಾಖಲಾತಿ ಕೇಳುತ್ತಾರೆ. ಇದಕ್ಕೆಲ್ಲ ಮುರುಗೇಶಪ್ಪ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.4 ಗುಂಟೆ ಜಾಗವನ್ನು ಅತಿಕ್ರಮಣ ಮಾಡಲು ಟಿಎಪಿಸಿಎಂಎಸ್ ಪದಾಧಿಕಾರಿಗಳಿಗೆ ಕಾರ್ಯದರ್ಶಿ ಮುರುಗೇಶಪ್ಪ ತಪ್ಪು ಮಾಹಿತಿ ನೀಡಿದ್ದಾರೆ. ಏನೂ ಗೊತ್ತಿಲ್ಲದ ಪದಾಧಿಕಾರಿಗಳು ಜಾಗ ಅತಿಕ್ರಮಣಕ್ಕೆ ಮುಂದಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಜಾಗಕ್ಕೆ ಕಡದಕಟ್ಟೆ ಗ್ರಾ.ಪಂ. ಕಚೇರಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ತಾವೇ ಕಂದಾಯ ಪಾವತಿಸುತ್ತಿದ್ದು, ಅದು ಹೇಗೆ ಆ ಜಾಗ ಟಿಎಪಿಸಿಎಂಎಸ್‌ಗೆ ಸೇರುತ್ತದೆ ಎಂದು ಚಿದಾನಂದಮೂರ್ತಿ ಪ್ರಶ್ನಿಸಿದರು.4 ಗುಂಟೆ ಜಾಗದ ಅತಿಕ್ರಮಣ ಪ್ರಶ್ನಿಸಿದರೆ ಮುರುಗೇಶಪ್ಪ ತಮಗೆ ಪ್ರಾಣ ಬೆದರಿಕೆ ಹಾಕುತ್ತಾರೆ, ಅಲ್ಲದೇ, ಹಲ್ಲೆ ನಡೆಸುವುದಾಗಿ ಹೆದರಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.