ಶನಿವಾರ, ಮೇ 8, 2021
19 °C

ಜಮೀನು ದೊರೆತಲ್ಲಿ ಅಕಾಡೆಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಆಸುಪಾಸಿನಲ್ಲಿ ಎರಡು- ಮೂರು ಎಕರೆ ಜಮೀನು ದೊರೆತಲ್ಲಿ ವಲಯ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಉತ್ಸುಕವಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹೇಳಿದರು.



ಕೆಎಂಸಿ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ `ಹೃದಯ ಓಟ~ದಲ್ಲಿ ಭಾಗವಹಿಸಿದ ನಂತರ ಅವರು ಪತ್ರಕರ್ತರ ಜತೆ ಮಾತನಾಡಿದರು. `ಗ್ರಾಮಾಂತರ ಪ್ರದೇಶಗಳಲ್ಲಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಕೆಲಸ ನಡೆದಿದೆ. ಮೈಸೂರು, ಶಿವಮೊಗ್ಗದ್ಲ್ಲಲೂ ಕೆಲಸ ಆಗುತ್ತಿದೆ. ವಿದ್ಯಾರ್ಥಿಗಳು ಶಾಲೆ ಮುಗಿಸಿ ಅಭ್ಯಾಸ ನಡೆಸುವ ಸ್ಥಳಕ್ಕೆ ತಲುಪಲು ಹೆಚ್ಚು   ಕಾಲ ತೆಗೆದುಕೊಳ್ಳುವಂತಾಗಬಾರದು.

 

ಅಕಾಡೆಮಿ ಆರಂಭವಾದ ಎರಡು ವರ್ಷಗಳಲ್ಲಿ ಉಚಿತ ಸೌಲಭ್ಯಗಳನ್ನು ನೀಡಿ ವಿಭಿನ್ನ ವಯೋವರ್ಗಗಳಲ್ಲಿ 150 ಆಟಗಾರರನ್ನು ತಯಾರಿಸುವುದು ನಮ್ಮ ಗುರಿ~ ಎಂದು ಭಾರತ ತಂಡದ ಮಾಜಿ ಮಧ್ಯಮ ವೇಗದ ಬೌಲರ್ ಹೇಳಿದರು.



ಅಂಪೈರು ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ಸಂಬಂಧಿಸಿದಂತೆ ಒಂದೆರಡು ವಿಷಯಗಳ ಬಗ್ಗೆ ಇತ್ಯರ್ಥವಾಗಬೇಕಿದೆ. ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳೀ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ವರ್ಷದ ಫೆ. 1ರಿಂದ 15ರ ವರೆಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಡೆಸಲಾಗುವುದು ಎಂದು ತಿಳಿಸಿದರು.



ಒಂದು ದಿನದ ಕ್ರಿಕೆಟ್ ಪಂದ್ಯವನ್ನು ಎರಡು ಇನಿಂಗ್ಸ್‌ಗಳಲ್ಲಿ ಆಡಬೇಕೆಂಬ ಸಚಿನ್ ತೆಂಡೂಲ್ಕರ್ ಅವರ ಯೋಚನೆ ಒಳ್ಳೆಯದೇ. ಆದರೆ ಇದು ವಾಸ್ತವಕ್ಕೆ ಬರಲು 5-6 ವರ್ಷ ಹಿಡಿಯಬಹುದು. ಒಂದು ದಿನದ ಪಂದ್ಯ 20-20 ಮಾದರಿಗೆ ಬರಲು ಸಾಕಷ್ಟು ಸಮಯ ಹಿಡಿಯಿತು. ಆದರೆ ಇಲ್ಲೂ ಬ್ಯಾಟ್ಸ್ ಮನ್ನರು ಪ್ರಾಬಲ್ಯ ಸಾಧಿಸಬಹುದು ಎಂದು ನಕ್ಕರು.



ಜಹೀರ್ ಖಾನ್ ಗಾಯದ ಸಮಸ್ಯೆ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಯಸ್ಸಾದಂತೆ ದೈಹಿಕ ಅರ್ಹತೆ ಕಾಪಾಡುವುದು ಕಷ್ಟ. ಇದಕ್ಕೆ ಅತಿಯಾದ ಕ್ರಿಕೆಟ್ ಆಡುವುದು ಕಾರಣವಲ್ಲ. ಒಬ್ಬ ವೇಗದ ಬೌಲರ್ ಆಗಿ ಬೆಳೆಯಬೇಕಾದರೆ ವರ್ಷಕ್ಕೆ 800 ರಿಂದ 900 ಓವರ್ ಮಾಡುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.