ಮಂಗಳವಾರ, ಜೂನ್ 22, 2021
27 °C

ಜಮೀನ್ದಾರಿ ಪದ್ಧತಿ ವಿರುದ್ಧ ಜನಸಂಘದ ಕಳಕಳಿ

ಜಿ.ಬಿ.ಹರೀಶ್ Updated:

ಅಕ್ಷರ ಗಾತ್ರ : | |

ಈಗ ಲೋಕಸಭಾ ಚುನಾವಣೆ ಬಿಸಿ ಆರಂಭ­ವಾಗಿದೆ. ಕೆಲವು ದಶಕಗಳ ಹಿಂದೆ ಭಾರತ ಜನತಂತ್ರ­ವನ್ನು ಅಳವಡಿಸಿ­ಕೊಂಡಿತು. ಆಗ ಭ್ರಷ್ಟರನ್ನು ತಮ್ಮ ಪಕ್ಷದೊಳಗೆ ಬಿಟ್ಟು ಕೊಳ್ಳಬಾರದೆಂಬ ಅರಿವು ಎಲ್ಲರಿಗೂ ಇತ್ತು. ವಿವಿಧ ಪಕ್ಷಗಳ ಮಾದರಿ  ನಡವಳಿಕೆ ಸದನದ ಒಳಗೆ ಮತ್ತು ಹೊರಗೆ ಏಕ ರೀತಿಯಲ್ಲಿ ಕಟ್ಟೆಚ್ಚರ­ದಿಂದ ಇರುತ್ತಿತ್ತು.ಈಗ ರಾಜಕೀಯವಾಗಿ ಸ್ವಲ್ಪ ಹಿಂದೆ ಸರಿದಿರುವ ಬಿಜೆಪಿ ಹಿರಿಯ ನಾಯಕ  ಎಲ್.ಕೆ.ಅಡ್ವಾಣಿ, ಅಂದಿನ ಅವರ ಪಕ್ಷ ರಾಜಸ್ತಾನದ  ಮೊದಲ ವಿಧಾನ ಸಭಾ ಚುನಾವಣೆ­ಯಲ್ಲಿ ಭೂಮಾಲಿಕ ರಾಜಕಾರಣಿಗಳ ಬಗ್ಗೆ ಕಠಿಣ ಧೋರಣೆ ದಾಖಲಿಸಿದ್ದಾರೆ.ರಾಜಸ್ತಾನದ ಮೊದಲ ವಿಧಾನ ಸಭಾ ಚುನಾವಣೆ­ಯಲ್ಲಿ ಜನಸಂಘವು 8 ಸ್ಥಾನಗಳಲ್ಲಿ ಗೆದ್ದಿತ್ತು. ಆಗ ಆ ರಾಜ್ಯದ ಒಟ್ಟು ವಿಧಾನ ಸಭಾ ಸೀಟುಗಳ ಸಂಖ್ಯೆ 160. ತಮ್ಮ ಪಕ್ಷ ಪ್ರತಿನಿಧಿಸಿ  ಗೆದ್ದಿರುವವರು  ದೊಡ್ಡ ಜಹಗೀರು ಗಳನ್ನು ಹೊಂದಿರಬಾರದು ಎಂದು ಜನಸಂಘದ ವರಿಷ್ಠ­ರಾದ ಪಂಡಿತ ದೀನ್ ದಯಾಳು ಉಪಾಧ್ಯಾಯ ಮತ್ತು ಡಾ.ಶ್ಯಾಮಪ್ರಸಾದ್ ಮುಖರ್ಜಿ ನಿರ್ಧರಿಸಿದ್ದರು.ಈ ಅಂಶ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇತ್ತು. ಗೆದ್ದ 8 ಶಾಸಕರ ಪೈಕಿ ಎಲ್ಲರೂ ಈ ನಿಯಮಕ್ಕೆ ವಿರುದ್ಧ­ವಾಗಿ ಜಹಗೀ­ರು­ದಾರರೇ ಆಗಿದ್ದರು. ಚುನಾವಣೆ ಬಳಿಕ ಜನ­­ಸಂಘ ಈ ಜಹಗೀರು ಪದ್ಧತಿ ವಿರುದ್ಧ ದನಿಯೆತ್ತಲು ನಿಶ್ಚಯಿಸಿತು. ಆದರೆ ಪಕ್ಷದ ಈ ನಿಲುವನ್ನು ಆಗ ತಾನೆ ಗೆದ್ದಿದ್ದ ಜನಸಂಘದ ಶಾಸಕರಲ್ಲಿ ಭೈರೋನ್‌ಸಿಂಗ್ ಶೆಖಾ­ವತ್ ಮತ್ತು ಜಗತ್ ಸಿಂಗ್ ಝಾಲು ಎಂಬ ಶಾಸಕ­ರನ್ನು ಹೊರತು­ಪಡಿಸಿ ಉಳಿದ ಆರು ಮಂದಿ ವಿರೋಧಿಸಿದ್ದರು!ರಾಜಸ್ತಾನದ ಉಸ್ತುವಾರಿ ಹೊತ್ತಿದ್ದ ಅಡ್ವಾಣಿ, ಈ ಒಳ ಬಂಡಾಯವನ್ನು ಕೇಂದ್ರ ನಾಯಕತ್ವದ ಗಮನಕ್ಕೆ ತಂದಾಗ ಉಪಾಧ್ಯಾಯ ಮತ್ತು ಡಾ.ಮುಖರ್ಜಿ ಜೈಪುರಕ್ಕೆ ಬಂದು ಬಿಕ್ಕಟ್ಟು ಬಗೆಹರಿಸಲು ಆರು ಮಂದಿ­ಯೊಡನೆ ಮಾತನಾಡಿ­ದರು. ಆಗ ಪಕ್ಷದ ತತ್ವಸಿದ್ಧಾಂತ ಒಪ್ಪದ ಆರು ವಿಜೇತ ಶಾಸಕರನ್ನು ಪಕ್ಷದಿಂದ ವಜಾ ಮಾಡಲಾಯಿತು. ಇದನ್ನು ತಮ್ಮ ‘ಮೈ ಕಂಟ್ರಿ ಮೈ ಪೀಪಲ್’ ಕೃತಿಯಲ್ಲಿ ಎಲ್.ಕೆ.ಅಡ್ವಾಣಿ ದಾಖಲಿಸಿ­ದ್ದಾರೆ. ಆದರೆ ಇದು ಈಗ ಎಲ್ಲೆಡೆ ಅಪರೂಪ­ವಾಗಿರುವ, ಸಾರ್ವಜನಿಕ ಬದುಕಿನಲ್ಲಿ ಮರೆಯಾಗಿ­ರುವ ವಿದ್ಯಮಾನ. ಹಣಬಲ­ವಿರುವವರೇ ಹೆಚ್ಚಾಗಿ ರಾಜಕಾರಣದಲ್ಲಿ ಮೆರೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.