ಜಮೀರ್‌ಗೆ ಮೋದಿ ನೆನಪು

7

ಜಮೀರ್‌ಗೆ ಮೋದಿ ನೆನಪು

Published:
Updated:

ಬೆಂಗಳೂರು: `ಗುಜರಾತ್ ವಿಧಾನಸಭೆಗೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ನರೇಂದ್ರ ಮೋದಿ ಅವರೇ ಬಿಜೆಪಿ ಅಭ್ಯರ್ಥಿ ಎಂಬಂತಹ ವಾತಾವರಣ ಇತ್ತು. ಅದೇ ರೀತಿ, ರಾಜ್ಯದ 224ಕ್ಕೂ ವಿಧಾನಸಭಾ ಕ್ಷೇತ್ರಗಳಿಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿ ಎನ್ನಬೇಕು' ಎಂದು ಶಾಸಕ ಬಿ.ಜಡ್. ಜಮೀರ್ ಅಹಮದ್ ಖಾನ್ ಹೇಳಿದರು.ಜೆಡಿಎಸ್ ವತಿಯಿಂದ ಪದ್ಮನಾಭ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖಾನ್, `ಅಲ್ಲಿ (ಗುಜರಾತ್) ಎಲ್ಲ ಕ್ಷೇತ್ರಗಳಿಗೂ ಮೋದಿಯೇ ಬಿಜೆಪಿ ಅಭ್ಯರ್ಥಿ ಎಂದಂತೆ ಇಲ್ಲಿ, ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎಂದು ಹೇಳಬೇಕು. ಅಂಥ ಪ್ರಭಾವಿ ನಾಯಕ ಕುಮಾರಸ್ವಾಮಿ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry