ಜಮ್ಮುವಿನಲ್ಲಿ ಗುಂಡಿನ ಕಾಳಗ: ಹುಣಸೂರಿನ ಯೋಧ ಸಾವು

ಭಾನುವಾರ, ಮೇ 19, 2019
32 °C

ಜಮ್ಮುವಿನಲ್ಲಿ ಗುಂಡಿನ ಕಾಳಗ: ಹುಣಸೂರಿನ ಯೋಧ ಸಾವು

Published:
Updated:

ಹುಣಸೂರು:  ಗಡಿ ಭದ್ರತಾ ಪಡೆ (ಬಿ.ಸ್‌ಎಫ್)ಯಲ್ಲಿ ಯೋಧನಾಗಿದ್ದ ಹುಣಸೂರು ತಾಲ್ಲೂಕಿನ ಚೌಡಿಕಟ್ಟೆಯ ಎಸ್. ಆನಂದರಾವ್ ಜಮ್ಮುವಿನ ರಜೋರಿ ಜಿಲ್ಲೆಯಲ್ಲಿರುವ ಭಾರತ ಗಡಿಯಲ್ಲಿ ಶನಿವಾರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆ. ಇವರಿಗೆ ತಾಯಿ ಲೀಲಾಬಾಯಿ, ತಂಗಿ  ಪುಷ್ಪಾಬಾಯಿ ಇದ್ದಾರೆ.ಆನಂದ ರಾವ್  ಶನಿವಾರ ರಾತ್ರಿ 7 ರಿಂದ 10 ಗಂಟೆಯ ಅವಧಿಯಲ್ಲಿ ಜಮ್ಮುವಿನ ರಜೋರಿ ಜಿಲ್ಲೆಯ ಗಡಿ ರೇಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ  ಸಂದರ್ಭದಲ್ಲಿ  ಶತ್ರು ಪಾಳೆಯದೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಆನಂದರಾವ್‌ಗೆ ಮೂರು ಗುಂಡು ತಗಲಿ ಸ್ಥಳದಲ್ಲೇ ಮೃತಪಟ್ಟರು. ಆನಂದ್‌ರಾವ್  ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.  ಆನಂದ್‌ರಾವ್ ಅವರ ಪಾರ್ಥಿವ ಶರೀರ ಸೋಮವಾರ ರಾತ್ರಿ ಇಲ್ಲವೇ ಮಂಗಳವಾರ ಚೌಡಿಕಟ್ಟೆ ತಲುಪುವ ಸಾಧ್ಯತೆ ಇದೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry