ಸೋಮವಾರ, ಆಗಸ್ಟ್ 26, 2019
20 °C

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭೂಕಂಪ

Published:
Updated:

ಜಮ್ಮು (ಪಿಟಿಐ) : ಜಮ್ಮು - ಕಾಶ್ಮೀರದಲ್ಲಿ ಶುಕ್ರವಾರ 5.4 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ಶನಿವಾರ ನಸುಕಿನ ವೇಳೆಯಲ್ಲಿ ಕಿಶ್ತವಾರ್ ಮತ್ತು ದೊಡಾ ಜಿಲ್ಲೆಗಳ ಹಾಗೂ ಕಣಿವೆಯ ಕೆಲವೆಡೆಗಳಲ್ಲಿ 5.2 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಿಶ್ತವಾರ್‌ನ ಈಶಾನ್ಯ ಭಾಗದಲ್ಲಿ 12 ಕಿ.ಮೀ ಮತ್ತು ಆಗ್ನೇಯ ಭಾಗದಲ್ಲಿ 78 ಕಿ.ಮೀ ಭೂಕಂಪನದ ಮೂಲ ಕೇಂದ್ರವಾಗಿದ್ದು, ಸುಮಾರು 9 ಸೆಕೆಂಡ್‌ಗಳ ಕಾಲ ಎರಡು ಬಾರಿ ಭೂಮಿ ಕಂಪಿಸಿದೆ. ತಕ್ಷಣಕ್ಕೆ ಸಾವು-ನೋವಿನ ಯಾವುದೇ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಶುಕ್ರವಾರ ಭೂಮಿ ಕಂಪಿಸಿದ್ದರಿಂದ ಭಯಗೊಂಡಿದ್ದ ಜನತೆ ಶನಿವಾರ ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ ಗಾಬರಿಗೊಂಡು ಮನೆಗಳಿಂದ ಹೊರಗೋಡಿಬಂದರು. ಭಯದಿಂದಾಗಿ ಇಡೀ ರಾತ್ರಿಯನ್ನು ಹೊರಗಡೆಯೇ ಕಳೆದರು. ಭೂಕಂಪನದಿಂದಾಗಿ ಮನೆಗಳು ಬಿರುಕುಬಿಟ್ಟಿವೆ.

Post Comments (+)