ಜಯಂತಿಗಳಿಗೆ ರಜೆ ರದ್ದಾಗಲಿ...

7

ಜಯಂತಿಗಳಿಗೆ ರಜೆ ರದ್ದಾಗಲಿ...

Published:
Updated:

ಮಹನೀಯರ, ದಾರ್ಶನಿಕರ, ಸಾಧಕರ ಜಯಂತಿಗಳನ್ನು ನಾವು ಎಲ್ಲೆಡೆಯೂ ಗೌರವಾದರ­ಗಳೊಂದಿಗೆ ಆಚರಿಸು­ತ್ತೇವೆ. ಜಯಂತಿಗಳಂದು ಆಯಾ ಮಹನೀಯರ ತತ್ವಾ­ದರ್ಶ­ಗಳು, ಸಮಾಜಕ್ಕೆ ನೀಡಿರುವ ಬಳುವಳಿಗಳು, ಅವರಲ್ಲಿನ ಜೀವನ ಮೌಲ್ಯಗಳನ್ನು ಸ್ಮರಿಸಿ, ಅವರು ಹಾಕಿಕೊಟ್ಟ ಸನ್ಮಾರ್ಗ­ದಲ್ಲಿ ಸಾಗುವುದು ಎಲ್ಲರ ಜವಾಬ್ದಾರಿ.ಆದರೆ, ಇತ್ತೀಚೆಗೆ ನಾವು ಆಚರಿಸುತ್ತಿರುವ, ಘೋಷಿಸು­ತ್ತಿರುವ ಜಯಂತಿ ಕಾರ್ಯಕ್ರಮಗಳು ನಿರ್ದಿಷ್ಟ ಸಮು­ದಾಯ­ಗಳ ಓಲೈಕೆಗೇನೋ ಎಂಬಂತೆ ಭಾಸವಾಗು­ತ್ತಿರು­ವುದು ಸುಳ್ಳಲ್ಲ. ರಜೆ ಘೋಷಿಸಿದ ಮಾತ್ರಕ್ಕೆ ಜಯಂತಿ  ಪರಿಪೂರ್ಣ­ವಾಗುತ್ತದೆ ಎಂಬ ಭಾವ ಜನರಲ್ಲಿ ಬೆಳೆಯುತ್ತಿ­ರುವುದು ದುರದೃಷ್ಟಕರ. ಸರ್ಕಾರ ಈ ವಿಷಯಗಳಲ್ಲಿ ವಿವೇಕದ ಹೆಜ್ಜೆ ಇಡುವುದು ಸೂಕ್ತ.ಮುಂದಿನ ದಿನಗಳಲ್ಲಾದರೂ ರಜೆ ರದ್ದುಪಡಿಸುವ ಬಗ್ಗೆ ಹಾಗೂ ಕ್ಯಾಲೆಂಡರ್‌ಗಳಲ್ಲಿ ಜಯಂತಿ ದಿನಾಂಕಗಳು ಕೆಂಪು ಶಾಯಿಯ ಬದಲು ಸಮೃದ್ಧಿ, ಉತ್ಸಾಹವನ್ನು ಇಮ್ಮಡಿ­ಗೊಳಿ­ಸುವ ಸಂಕೇತ ಸೂಚಕ ‘ಹಸಿರು’ ಶಾಯಿಯಲ್ಲಿ ನಮೂದಾಗು­ವಂತೆ ಸಂಬಂಧಪಟ್ಟವರು ಚಿಂತಿಸಿ ಕ್ರಮಕೈಗೊಳ್ಳಲಿ. ಕಚೇರಿಗಳು, ಬ್ಯಾಂಕ್‌ಗಳು, ಶಾಲೆಗಳಲ್ಲಿ ಜಯಂತಿ, ಆಚರಣೆ­ಗಳು ಬೆಳಗಿನ ಒಂದೆರಡು ತಾಸು ಅವಧಿಯಲ್ಲಿ  ಎಲ್ಲರ ಭಾಗ­ವಹಿಸು­ವಿಕೆಯಿಂದ ಸಡಗರದಿಂದ ಜರಗುವಂತಾಗಲಿ. ನಂತರ, ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ದೈನಂದಿನ ಕಾರ್ಯ­ಕಲಾಪ, ಕಡತ ವಿಲೇವಾರಿ...‘ದ್ವಿಗುಣ ಸಾಮರ್ಥ್ಯ’­­ದಲ್ಲಿ ಸಾಗಿ ಜಯಂತಿಗಳು  ಅರ್ಥಪೂರ್ಣ­ವಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry