ಬುಧವಾರ, ಅಕ್ಟೋಬರ್ 16, 2019
21 °C

ಜಯಕರ್ನಾಟಕ ಸಂಘಟನೆ ಗ್ರಾಮ ಶಾಖೆ ಉದ್ಘಾಟನೆ

Published:
Updated:

ಕನಕಪುರ: ರೈತರ ಪರಿಶ್ರಮದ ಫಲವಾಗಿ ನಾವು ಇಂದು ಸಂತೋಷ ಪಡುತ್ತಿದ್ದೇವೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶೈನ್ ಚಂಗಪ್ಪ ಹೇಳಿದರು.  ತಾಲ್ಲೂಕಿನ ಹೊಸಕೋಟೆ (ಕೋಣನಶೆಡ್ಡು) ಗ್ರಾಮದಲ್ಲಿ ಜಯಕರ್ನಾಟಕ ಸಂಘಟನೆಯ ಗ್ರಾಮ ಶಾಖೆಯಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಕಷ್ಟಗಳಿಗೆ ನಾವು ಸ್ಪಂದಿಸಬೇಕು. ರಾಜಕಾರಣ ಸ್ವಾರ್ಥದ ಹಾದಿ ಹಿಡಿದಿದೆ. ಈ ಬಗ್ಗೆ ಜನ ಜಾಗೃತಿ ಅವಶ್ಯ.ಜನ ಸಾಮಾನ್ಯರಿಗೆ ಸರ್ಕಾರದ  ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಘಟನೆ ಶಾಖೆಗಳನ್ನು ಆರಂಭಿಸುತ್ತಿರುವುದಾಗಿ ಹೇಳಿದರು.ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲು ಸಂಘಟನೆ ಸಿದ್ದವಿದೆ. ಆ ಕಾರಣದಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಗ್ರಾಮ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.  ತಾಲೂಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್, ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಡಿ.ಜಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಪಿ.ಕೃಷ್ಣಪ್ಪ, ಜಿಲ್ಲಾ ಯುವಘಟಕದ ಅಧ್ಯಕ್ಷ  ಕೆ.ವಿ. ಆನಂದ್, ರಾಜೇಂದ್ರ, ಚಂದ್ರು, ಕಾಳಪ್ಪ, ಸತೀಶ್, ಮಂಜು, ರೈತ ಸಂಘದ ಪದಾಧಿಕಾರಿಗಳು  ಮತ್ತಿತರರು ಉಪಸ್ಥಿತರಿದ್ದರು.

 

Post Comments (+)