ಗುರುವಾರ , ಜುಲೈ 29, 2021
20 °C

ಜಯದ ವಿಶ್ವಾಸದಲ್ಲಿ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಹನ್ನೆರಡು ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಈಗ ಉತ್ಸಾಹದ ಖನಿ. ಆದರೆ ಸತತ ಆರು ಸೋಲುಗಳಿಂದ ಕಂಗೆಟ್ಟಿರುವ ಪುಣೆ ವಾರಿಯರ್ಸ್ ಇಂಡಿಯಾ ಮುಂದೆ ಕಠಿಣ ಹಾದಿ ಇದೆ.ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಸಚಿನ್ ತೆಂಡೂಲ್ಕರ್ ಸಾರಥ್ಯದ ಮುಂಬೈ ಇಂಡಿಯನ್ಸ್ ಗೆಲುವಿನ ವಿಶ್ವಾಸದಲ್ಲಿದೆ.ಯುವರಾಜ್ ಸಿಂಗ್ ಸಾರಥ್ಯದ ಪುಣೆ ವಾರಿಯರ್ಸ್ ಪರಿಸ್ಥಿತಿ ಶೋಚನೀಯ. ಲೀಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಈ ತಂಡದವರು ಜಯಕ್ಕಾಗಿ ಪರದಾಡುತ್ತಿದ್ದಾರೆ.ತಂಡಗಳುಮುಂಬೈ ಇಂಡಿಯನ್ಸ್

ಸಚಿನ್ ತೆಂಡೂಲ್ಕರ್ (ನಾಯಕ), ಡೇವಿ ಜೇಕಬ್ಸ್, ಅಂಬಟಿ ರಾಯುಡು, ರೋಹಿತ್ ಶರ್ಮ, ಕೀರನ್ ಪೊಲಾರ್ಡ್, ಆಂಡ್ರ್ಯೂ ಸೈಮಂಡ್ಸ್, ಆರ್.ಸತೀಶ್, ಟಿ. ಸುಮನ್, ಲಸಿತ್ ಮಾಲಿಂಗ, ಹರಭಜನ್ ಸಿಂಗ್, ಅಲಿ ಮುರ್ತಜಾ, ದಿಲ್ಹಾರ ಫೆರ್ನಾಂಡೊ, ಜೇಮ್ಸ್ ಫ್ರಾಂಕ್ಲಿನ್, ಅಬು ನೆಚಿಮ್, ಮೊಯ್ಸಸ್ ಹೆನ್ರಿಕ್ಸ್, ಧವಳ್ ಕುಲಕರ್ಣಿ ಹಾಗೂ ಮುನಾಫ್ ಪಟೇಲ್.ಪುಣೆ ವಾರಿಯರ್ಸ್ ಇಂಡಿಯಾಯುವರಾಜ್ ಸಿಂಗ್ (ನಾಯಕ), ಸೌರವ್ ಗಂಗೂಲಿ, ಜೆಸ್ಸಿ ರೈಡರ್, ಮೋನಿಶ್ ಮಿಶ್ರಾ, ಮಿಥುನ್ ಮನ್ಹಾಸ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ವೇಯ್ನಾ ಪಾರ್ನೆಲ್, ರಾಹುಲ್ ಶರ್ಮಾ, ಮುರಳಿ ಕಾರ್ತಿಕ್, ಕಾಲಮ್ ಫರ್ಗ್ಯುಸನ್, ಶ್ರೀಕಾಂತ್ ವಾಗ್, ಮಿಷೆಲ್ ಮಾರ್ಷ್, ನೇಥನ್ ಮೆಕ್ಲಮ್, ಜೆರೊಮಿ ಟೇಲರ್,  ಭುವನೇಶ್ವರ್ ಕುಮಾರ್,   ಗ್ರೇಮ್ ಸ್ಮಿತ್ ಹಾಗೂ ಆಲ್ಫೊನ್ಸೊ ಥಾಮಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.