ಮಂಗಳವಾರ, ಏಪ್ರಿಲ್ 20, 2021
32 °C

ಜಯದ ಹಾದಿಯಲ್ಲಿ ಸಾಗುತ್ತಿರಬೇಕು: ಶಕೀಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್ (ಪಿಟಿಐ): ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿರುವ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ‘ಗೆಲುವಿನ ಹಾದಿಯಲ್ಲಿ ಸಾಗುತ್ತಿರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಲೆಂಡ್ ವಿರುದ್ಧದ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಸೋಮವಾರ ಆರು ವಿಕೆಟ್‌ಗಳ ಅಂತರದಿಂದ ವಿಜಯ ಸಾಧಿಸಿದ ನಂತರ ಮಾತನಾಡಿದ ಶಕೀಬ್ ಅವರು ‘ಜಯ ಪಡೆಯುತ್ತಿರಬೇಕು; ಅದರ ಹೊರತಾಗಿ ಬೇರೆ ದಾರಿ ಹಾಗೂ ಗುರಿ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಈ ಒಂದು ಗೆಲುವಿನಿಂದ ಸಮಾಧಾನ ಪಡಬೇಕಾಗಿಲ್ಲ. ಇನ್ನೂ ಒಂದು ಲೀಗ್ ಪಂದ್ಯವಿದೆ. ಅದು ದಕ್ಷಿಣ ಆಫ್ರಿಕಾ ವಿರುದ್ಧ. ಅದನ್ನೂ ಗೆಲ್ಲುವುದು ಗುರಿ ಆಗಬೇಕು. ನಾಕ್‌ಔಟ್‌ನಲ್ಲಿ ಆಡಲೇಬೇಕು ಎನ್ನುವುದು ನಮ್ಮ ಮಹದಾಸೆ. ಆ ಹಂತದಲ್ಲಿಯಂತೂ ತಪ್ಪುಗಳಿಗೆ ಅವಕಾಶ ಇರಕೂಡದು. ಒಂದು ತಪ್ಪು ದೊಡ್ಡ ಕನಸನ್ನು ನುಚ್ಚುನೂರು ಮಾಡುತ್ತದೆ ಎಂದು ಅವರು ತಮ್ಮ ತಂಡದ ಆಟಗಾರರನ್ನು ಎಚ್ಚರಿಸಿದ್ದಾರೆ. ‘ಗುಂಪು ಹಂತದ ಕೊನೆಯ ಹೋರಾಟ ನಡೆಯುವುದು ದಕ್ಷಿಣ ಆಫ್ರಿಕಾ ಎದುರು. ಆ ಪಂದ್ಯ ಜಯಿಸುವುದಷ್ಟೇ ಮುಖ್ಯವಲ್ಲ. ದೊಡ್ಡ ಅಂತರದಲ್ಲಿ ಯಶಸ್ಸು ಸಾಧಿಸುವ ಕಡೆಗೆ ಗಮನ ಇಡಬೇಕು’ ಎಂದು ಶಕೀಬ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.