ಶುಕ್ರವಾರ, ನವೆಂಬರ್ 22, 2019
23 °C

ಜಯರಾಮ್, ಗುರು ಎರಡನೇ ಸುತ್ತಿಗೆ ಲಗ್ಗೆ

Published:
Updated:

ಸಿಡ್ನಿ (ಐಎಎನ್‌ಎಸ್): ಭಾರತದ ಅಜಯ್ ಜಯರಾಮ್, ಆರ್.ಎಂ.ವಿ ಗುರುಸಾಯಿದತ್ ಮತ್ತು ಆನಂದ್ ಪವಾರ್, `ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್' ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಅಜಯ್ ಜಯರಾಮ್ 21-11, 21-14ರಿಂದ ಮಲೇಷ್ಯಾದ ಕ್ವೋಂಗ್ ಬೆಂಗ್ ಚಾನ್ ವಿರುದ್ಧ ಜಯ ಸಾಧಿಸಿದರು. ಆನಂದ್ ಪವಾರ್ 19-21, 21-11, 21-13ರಿಂದ ಇಂಡೋನೇಷ್ಯಾದ ಆರಿಫ್ ರಾಮಧನ್ ವಿರುದ್ಧ ಗೆದ್ದರು. ಗುರುಸಾಯಿದತ್ 21-4, 21-7ರಿಂದ ಆಸ್ಟ್ರೇಲಿಯಾದ ಹು ವೆನ್ ಚ್ಯು ವಿರುದ್ಧ ಜಯದ ನಗು ಬೀರಿದರು.ಆದರೆ, ಚೇತನ್ ಆನಂದ್ ಮತ್ತು ಅರವಿಂದ ಭಟ್ ಮೊದಲ ಸುತ್ತಿನಲ್ಲೇ ಪರಾಭವಗೊಂಡರು. ಚೇತನ್ ಆನಂದ್ 14-21, 16-21ರಿಂದ ಇಂಡೋನೇಷ್ಯಾದ ರಿಯಾಂಟೋ ಸುಬಾಗ್ಜ ವಿರುದ್ಧ ಸೋತರು. ಅಂತೆಯೇ, ಅರವಿಂದ ಭಟ್ 10-21, 18-21ರಿಂದ ಮಲೇಷ್ಯಾದ ಲೀ ಚೋಂಗ್ ವಿರುದ್ಧ ಸೋಲು ಅನುಭವಿಸಿದರು.

ಪ್ರತಿಕ್ರಿಯಿಸಿ (+)