ಜಯಲಲಿತಾ ಖುದ್ದು ಹಾಜರಿಗೆ ಸುಪ್ರೀಂ ಸೂಚನೆ

ಸೋಮವಾರ, ಮೇ 27, 2019
33 °C

ಜಯಲಲಿತಾ ಖುದ್ದು ಹಾಜರಿಗೆ ಸುಪ್ರೀಂ ಸೂಚನೆ

Published:
Updated:

ನವದೆಹಲಿ(ಪಿಟಿಐ): ಅಕ್ರಮ ಆಸ್ತಿ ಸಂಪಾದನೆಯ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಕ್ಟೋಬರ್ 20ರ ಒಳಗಾಗಿ ಕರ್ನಾಟಕ ವಿಚಾರಣಾಧೀನ ನ್ಯಾಯಾಲಯದ ಎದುರು ಖುದ್ದಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.ಭದ್ರತೆಯ ದೃಷ್ಟಿಯಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಬಗೆಗಿನ ನಿರ್ಧಾರವನ್ನು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರಿಗೆ ಬಿಡಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ದೀಪಕ್ ವರ್ಮಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry