ಸೋಮವಾರ, ನವೆಂಬರ್ 18, 2019
20 °C

ಜಯವಾಡಗಿಯಲ್ಲಿ ಸಂಭ್ರಮದ ಶಿವಪ್ಪ ಮುತ್ಯಾ ಜಾತ್ರೆ

Published:
Updated:

ಬಸವನಬಾಗೇವಾಡಿ: ತಾಲ್ಲೂಕಿನ ಜಯವಾಡಗಿ ಗ್ರಾಮದ ಸೋಮ ನಾಥೇಶ್ವರ ಮತ್ತು ಶಿವಪ್ಪಮುತ್ಯಾನ ಜಾತ್ರೆ ಅಂಗವಾಗಿ ಇತ್ತೀಚೆಗೆ ಸಾವಿರಾರು ಭಕ್ತರ ಜಯಘೋಷದೊಂದಿಗೆ ಸಡಗರ ಸಂಭ್ರಮದಿಂದ ರಥೋತ್ಸವ ಜರುಗಿತು. ರಥೋತ್ಸವದ ಪೂರ್ವ ಭಾವಿಯಾಗಿ ವಿವಿಧ ವಾದ್ಯಗಳೊಂದಿಗೆ ಬ್ಯಾಕೋಡ ಗ್ರಾಮಸ್ಥರು ಕಳಸ ತೆಗೆದುಕೊಂಡು ಬಂದರು.  ಸೋಲವಾಡಗಿ ಗ್ರಾಮಸ್ಥರು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಯೊಂದಿಗೆ ಆಗಮಿಸಿ ರಥದ ಮೀಣಿ ಕಟ್ಟಿದರು.ಅಗಸಬಾಳ ಗ್ರಾಮಸ್ಥರು ಬೆಳ್ಳಿ ಛತ್ರ ಚಾಮರವನ್ನು ತೆಗೆದುಕೊಂಡು ಬಂದರು.   ವಿವಿಧ ಹೂವುಗಳಿಂದ ಅಲಂಕೃತಗೊಂಡ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತಾಳಿಕೋಟೆ ಖಾಸ್ಗತ್ತೇಶ್ವರ ಸ್ವಾಮೀಜಿ, ಹರಸೂರಿನ ಕರಿಸಿದ್ದೇಶ್ವರ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.ಜೈ ಸೋಮನಾಥೇಶ್ವರ, ಜೈ ಶಿವಪ್ಪ ಮುತ್ಯಾ ಎಂಬ ಘೋಷಣೆ ಗಳೊಂದಿಗೆ ಭಕ್ತರು ಉತ್ತತ್ತಿ, ಚುರುಮರಿ ತೂರಿ ರಥ ಮುಟ್ಟಿ ನಮಸ್ಕರಿಸಿ ಪುನೀತ ರಾದರು.ಪ್ರತಿ ವರ್ಷ ಯುಗಾದಿ ದಿನದಂದು ಜರುಗುವ ಜಾತ್ರೆಯಲ್ಲಿ ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.ಜಾತ್ರೆಯಲ್ಲಿ ಮಿಠಾಯಿ ಮತ್ತು ಮಕ್ಕಳ ಆಟಿಕೆ ಸಾಮಾನುಗಳ ಖರಿದಿ ಭರಾಟೆಯು ಜೋರಾಗಿತ್ತು, ಜಾತ್ರೆಗೆ ಆಗಮಿಸಿದ ಭಕ್ತರು ಬೀಸಿಲಿನ ತಾಪ ನಿವಾರಿಸಿಕೊಳ್ಳಲು  ತಂಪು ಪಾನೀಯ ಹಾಗೂ ಕಲ್ಲಂಗಡಿ ಅಂಗಡಿಗಳಿಗೆ ಮೊರೆ ಹೋದರು.ದನಗಳ ಜಾತ್ರೆ: ಜಾತ್ರೆಯ ಅಂಗವಾಗಿ ರಾಸುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಜಾತ್ರೆಗೆ ವಿಜಾಪುರ ಜಿಲ್ಲೆ  ಸೇರಿದಂತೆ ಬೆಳಗಾವಿ, ರಾಯ ಚೂರು ಹಾಗೂ ಮುಂತಾದ  ಜಿಲ್ಲೆಯ  ರೈತರು ತಮ್ಮ ಎತ್ತುಗಳನ್ನು ಮಾರಾಟ ಕ್ಕಾಗಿ ಮುಂಚಿತವಾಗಿ ತೆಗೆದುಕೊಂಡು ಬಂದಿದ್ದರು. ಸುವಾರು 20 ಎಕರೆ ಜಮೀನಿನಲ್ಲಿ ಎಲ್ಲಿ ಕಣ್ಣು ಹಾಯಿಸಿ ದರೂ ದನಗಳು ಕಂಡು ಬರುತ್ತಿದ್ದವು.

ಸುಮಾರು 50 ಸಾವಿರದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ದನಗಳು ಬಂದು ಸೇರಿದ್ದವು.ಮಾರಾಟಕ್ಕಾಗಿ ತಂದ ರೈತರು ತಮ್ಮ ಎತ್ತುಗಳ ಬೆಲೆ ಕುದುರಿಸುವುದು ಹಾಗೂ ಖರೀದಾರರು ಉತ್ತಮ ರಾಸುಗಳಿಗಾಗಿ ಅಲೆಯುತ್ತಿ ರುವುದು ಸಾಮಾನ್ಯವಾಗಿತ್ತು.ಈ ಸಲದ ಜಾತ್ರೆಯಲ್ಲಿ ಎತ್ತಿನ ಬಂಡಿಗಳ ಮಾರಾಟವು ಭರ್ಜರಿಯಾಗಿತ್ತು.

ಪ್ರತಿಕ್ರಿಯಿಸಿ (+)