ಜಯ ಕರ್ನಾಟಕ ಸಂಘಟನೆಯ ಒತ್ತಾಯ

7

ಜಯ ಕರ್ನಾಟಕ ಸಂಘಟನೆಯ ಒತ್ತಾಯ

Published:
Updated:

ರಾಯಚೂರು: ಪೆಟ್ರೋಲ್ ಬೆಲೆ ಏರಿಕೆ ಕೂಡಲೇ ಹಿಂಪಡೆಯಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕವು ಒತ್ತಾಯಿಸಿದೆ.ಶುಕ್ರವಾರ ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಮೇಲಿಂದ ಮೇಲೆ ಪೆಟ್ರೋಲ್ ದರ ಏರಿಕೆ ಮಾಡುತ್ತಿದೆ. ಸಂಸತ್‌ನ ಬಜೆಟ್‌ನಲ್ಲಿ ಪೆಟ್ರೋಲ್ ಬೆಲೆ ಏರಿಕೆ ಕುರಿತು ಯಾವುದೇ ರೀತಿಯಲ್ಲಿ ಪ್ರಸ್ತಾವನೆ ಮಾಡಿಲ್ಲ. ಆದರೆ, ಬಜೆಟ್ ಮುಗಿದ ನಂತರವೇ ಪೆಟ್ರೋಲ್ ಬೆಲೆ ಏರಿಕೆ ಹೆಚ್ಚಳ ಮಾಡಿದೆ. ಇದರಿಂದ ಕೇಂದ್ರ ಸರ್ಕಾರವು ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿದೆ.ಯುಪಿಎ ಸರ್ಕಾರ ದೇಶದಲ್ಲಿ ಅಧಿಕಾರ ನಡೆಸಲು ಸಮರ್ಥವಾಗಿಲ್ಲ. ಅಮೆರಿಕದ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯವು ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಕಾರಣ ನೀಡುತ್ತಿರುವುದು ಖಂಡನೀಯ ಎಂದು ದೂರಿದೆ.ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಕೇಂದ್ರ ಸರ್ಕಾರವು ಏರಿಕೆ ಮಾಡಿರುವ ಪೆಟ್ರೋಲ್ ಬೆಲೆಯನ್ನು ಹಿಂಪಡೆ ಯುವಂತೆ ಆದೇಶ ಮಾಡಬೇಕು, ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ, ರಾಷ್ಟ್ರಪತಿ ಆಡಳಿತವನ್ನು ಜಾರಿ ಯಾಗಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಶಿವಕುಮಾರ ಯಾದವ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎಸ್.ರಾಜು, ಬಿ.ರಾಕೇಶ, ಜಾಫರ್ ಶರೀಫ್, ಜಿಯಾಉಲ್‌ಹಕ್ ಸೌದಾಗರ್, ಎಂ.ಡಿ ಮನಾನ್, ಮಹಾದೇವ ಯಾದವ್, ಎಂ.ಡಿ ಸಾಧಿಕ್, ಸಿ.ತಾಯ ಪ್ಪ,ಉರುಕುಂದಪ್ಪ, ಡಿ.ಸುರೇಶ, ಜಿ.ತಾಯಪ್ಪ. ವೈ.ಶಿವಶರಣ, ರವಿಬಿಂದ ಲಬಾವಿ, ನರಸಪ್ಪ ಯಕ್ಲಾಸಪುರ ಇದ್ದರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry