ಜಯ ಸಾಧಿಸಿದ ಆಸೀಸ್

7

ಜಯ ಸಾಧಿಸಿದ ಆಸೀಸ್

Published:
Updated:

ಹೋಬರ್ಟ್ (ಎಎಫ್‌ಪಿ): ಶಾನ್ ಮಾರ್ಷ್ (110) ಗಳಿಸಿದ ಶತಕ ಮತ್ತು ಡಗ್ ಬೋಲಿಂಜರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 46 ರನ್‌ಗಳ ಜಯ ಸಾಧಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 48.2 ಓವರ್‌ಗಳಲ್ಲಿ 230 ರನ್ ಗಳಿಸಿದರೆ, ಇಂಗ್ಲೆಂಡ್ 45 ಓವರ್‌ಗಳಲ್ಲಿ 184 ರನ್‌ಗಳಿಗೆ ಆಲೌಟಾಯಿತು. ಆಸೀಸ್ ಪರ ಡಗ್ ಬೋಲಿಂಜರ್ 28 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು 30 ರನ್ ಪೇರಿಸಿದ್ದರು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡ ಏಳು ಪಂದ್ಯಗಳ ಸರಣಿಯಲ್ಲಿ 2-0 ರಲ್ಲಿ ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 48.2 ಓವರ್‌ಗಳಲ್ಲಿ 230 (ಕ್ಯಾಮರೂನ್ ವೈಟ್ 45, ಶಾನ್ ಮಾರ್ಷ್ 110, ಡಗ್ ಬೋಲಿಂಜರ್ 30, ಅಜ್ಮಲ್ ಶಹಜಾದ್ 43ಕ್ಕೆ 3, ಕ್ರಿಸ್ ಟ್ರೆಮ್ಲೆಟ್ 22ಕ್ಕೆ 3, ಟಿಮ್ ಬ್ರೆಸ್ನನ್ 37ಕ್ಕೆ 2). ಇಂಗ್ಲೆಂಡ್: 45 ಓವರ್‌ಗಳಲ್ಲಿ 184 (ಜೊನಾಥನ್ ಟ್ರಾಟ್ 32, ಇಯಾನ್ ಬೆಲ್ 32, ಮೈಕಲ್ ಯಾರ್ಡಿ 22, ಡಗ್ ಬೋಲಿಂಜರ್ 28ಕ್ಕೆ 4, ಬ್ರೆಟ್ ಲೀ 39ಕ್ಕೆ 2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 46 ರನ್‌ಗಳ ಜಯ; ಏಳು ಪಂದ್ಯಗಳ ಸರಣಿಯಲ್ಲಿ 2-0 ರಲ್ಲಿ ಮುನ್ನಡೆ

ಪಂದ್ಯಶ್ರೇಷ್ಠ: ಶಾನ್ ಮಾರ್ಷ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry