ಜರಾವ ಮಹಿಳೆಯರ ಅರೆನಗ್ನ ನೃತ್ಯ: ಚಿತ್ರಿಸಿದ ಕಾನ್‌ಸ್ಟೇಬಲ್ ಬಂಧನ

7

ಜರಾವ ಮಹಿಳೆಯರ ಅರೆನಗ್ನ ನೃತ್ಯ: ಚಿತ್ರಿಸಿದ ಕಾನ್‌ಸ್ಟೇಬಲ್ ಬಂಧನ

Published:
Updated:

ಪೋರ್ಟ್ ಬ್ಲೇರ್ (ಪಿಟಿಐ):  ಜರಾವ ಬುಡಕಟ್ಟು ಮಹಿಳೆಯರು ಅರೆ ನಗ್ನವಾಗಿ ನರ್ತನ ಮಾಡಿದುದರ ವಿಡಿಯೊ ಚಿತ್ರೀಕರಣ ಮಾಡಿದ ಪ್ರಕರಣವನ್ನು ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಭೇದಿಸಿದ್ದಾರೆ.

ವಿದೇಶಿ ಪ್ರವಾಸಿಗರ ಮುಂದೆ ಅರೆನಗ್ನವಾಗಿ ನರ್ತಿಸಲು ಜರಾವ ಮಹಿಳೆಯರ ಮೇಲೆ ಒತ್ತಡ ಹೇರಿದ್ದ ಮತ್ತು ವಿಡಿಯೊ ಚಿತ್ರೀಕರಿಸಿದ್ದ ಕಾನ್‌ಸ್ಟೇಬಲ್‌ನನ್ನು ಮಂಗಳವಾರ ಬಂಧಿಸಲಾಗಿದೆ.

ಬಂಧಿತನನ್ನು ಸಿಲ್ವರಿುಸ್ ಕಿಂಡೊ ಎಂದು ಗುರುತಿಸಲಾಗಿದ್ದು,  ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ವಿಡಿಯೊದಲ್ಲಿ ಕಂಡು ಬಂದಿದ್ದ ಜರಾವ ಮಹಿಳೆಯರು ಕಾನ್‌ಸ್ಟೇಬಲ್‌ನನ್ನು ಗುರುತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

`ಈ ದೃಶ್ಯಾವಳಿಯನ್ನು 2007ರ ಜುಲೈ- ನವೆಂಬರ್ ನಡುವಿನ ಅವಧಿಯಲ್ಲಿ ಚಿತ್ರೀಕರಿಸಿರುವ ಸಾಧ್ಯತೆ ಇದೆ~ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry