ಜರ್ದಾರಿ ಜೊತೆ ವಿವಾಹ: ವರದಿ ತಿರಸ್ಕರಿಸಿದ ಮಹಿಳೆ

7

ಜರ್ದಾರಿ ಜೊತೆ ವಿವಾಹ: ವರದಿ ತಿರಸ್ಕರಿಸಿದ ಮಹಿಳೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ತಮ್ಮನ್ನು ವಿವಾಹವಾಗಲಿದ್ದಾರೆ ಎಂಬ ವರದಿಯನ್ನು ನಿರಾಕರಿಸಿರುವ ನ್ಯೂಯಾರ್ಕ್ ಮೂಲದ ವೈದ್ಯೆ ತನ್ವೀರ್ ಜಮಾನಿ ತಾವು ಅಧ್ಯಕ್ಷರನ್ನು ಇದುವರೆಗೂ ಭೇಟಿಯೇ ಆಗಿಲ್ಲ ಎಂದು ಹೇಳಿದ್ದಾರೆ.ಪಾಕಿಸ್ತಾನ ಪೀಪಲ್ಸ್ ಪಕ್ಷದ ಕಾರ್ಯಕರ್ತರೂ ಆಗಿರುವ ಜಮಾನಿ, ಜರ್ದಾರಿ ಅವರನ್ನು ಮದುವೆಯಾಗಲಿದ್ದಾರೆ ಎಂಬ ಕೆಲವು ಅನಾಮಧೇಯ ಬ್ಲಾಗ್ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ವರದಿಗಳು ಕಪೋಲ ಕಲ್ಪಿತ ಎಂದು ಅವರು ಮಾಧ್ಯಮಗಳಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry