ಜಲಕ್ಷಾಮದ ನಡುವೆಯೂ ನಳನಳಿಸುವ ಬೆಳೆ!

ಶುಕ್ರವಾರ, ಮೇ 24, 2019
26 °C

ಜಲಕ್ಷಾಮದ ನಡುವೆಯೂ ನಳನಳಿಸುವ ಬೆಳೆ!

Published:
Updated:

ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ, ಬೆಣ್ಣೆಹಳ್ಳಿ ಹೊರತುಪಡಿಸಿದರೆ ಉಳಿದೆಡೆ ಮಳೆ ಚೆನ್ನಾಗಿದೆ. ಬರಪೀಡಿತ ಪ್ರದೇಶ ಜಗಳೂರು, ಹರಪನಹಳ್ಳಿಯಲ್ಲೇ ಮಳೆ ಚೆನ್ನಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ ಇನ್ನು 15ದಿನಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ. ಬಿಳಿಚೋಡು ಭಾಗದಲ್ಲಿ ಜಲಕ್ಷಾಮವಿದೆ. ಆದರೆ, ಬೆಳೆ ನಳನಳಿಸುವಷ್ಟು ಭೂಮಿ ಹಸಿಯಾಗಿದೆ. ಹಾಗಾಗಿ, ಇಳುವರಿಗೆ ತೊಂದರೆ ಇಲ್ಲ. ಪ್ರಸಕ್ತ ವಾತಾವರಣ ರಾಗಿ ಮುಖ್ಯಬೆಳೆಗೆ ಹಾಗೂ ಅಕ್ಕಡಿ ಬೆಳೆಗೆ ಸೂಕ್ತಕಾಲ. ಜಿಲ್ಲೆಯ ರೈತರು ಪರ್ಯಾಯ ಬೆಳೆಗಳ ಮೊರೆ ಹೋಗಿದ್ದಾರೆ ಎಂದರು.

ಚನ್ನಗಿರಿಯಲ್ಲಿ ಈಚೆಗೆ ರೂ. 700ಗೆ ಕ್ವಿಂಟಲ್ ಯೂರಿಯಾ ಮಾರಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಗೊಬ್ಬರದಂಗಡಿಗೆ ಬೀಗ ಜಡಿಯಲಾಗಿದೆ. ರೈತರು ನಮ್ಮ ಮೇಲೆ ಕೋಪದಿಂದ ಮಾತನಾಡುತ್ತಿದ್ದಾರೆ. ನಿಜ, ಆದರೆ, ಯೂರಿಯಾ ಜತೆಗೇ ರಂಜಕ, ಪೊಟಾಷ್ ಮಿಶ್ರಣ ಮಾಡಿ ಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಇದು ರೈತರಿಗೆ ಉಪಯೋಗವಾಗಲಿದೆ. ಈ ಬಾರಿ ಬರದ ಕಾರಣ ಕೃಷಿ ಉತ್ಸವ ಆಚರಿಸಲಾಗುತ್ತಿಲ್ಲ. ಅದರ ಬದಲು ಕೃಷಿ ಜಾಗೃತಿ ಆಂದೋಲನ ಕೈಗೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ ನಾವೇ ಪ್ರಥಮ ಬಾರಿಗೆ ಇದನ್ನು ಕೈಗೊಂಡಿದ್ದೇವೆ. ಆ. 15ರಂದು ಸುವರ್ಣಭೂಮಿ ಫಲಾನುಭವಿಗಳಿಗೆ ಚೆಕ್ ವಿತರಿಸಲು ಸಚಿವ ರವೀಂದ್ರನಾಥ್ ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಹನಿ ನೀರಾವರಿ ಯೋಜನೆಯಡಿ 1,400 ಜತೆ ಸ್ಪಿಂಕ್ಲರ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry