ಜಲಚರಗಳಿಗೆ ಕುತ್ತು: ಕ್ರಮಕ್ಕೆ ಸೂಚನೆ

7

ಜಲಚರಗಳಿಗೆ ಕುತ್ತು: ಕ್ರಮಕ್ಕೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ತೀವ್ರ ತೆರನಾದ ಮೀನುಗಾರಿಕೆ ಹಾಗೂ ಮೀನುಗಾರಿಕಾ ವಲಯದಲ್ಲಿ ಅಕಸ್ಮಾತ್ ಆಗಿ ಸಮುದ್ರದ ದೈತ್ಯ ಜೀವಿಗಳು ಪ್ರವೇಶಿಸುವುದರಿಂದ ಕಡಲ ಜೀವಿಗಳ ಪ್ರಾಣಕ್ಕೆ ಕುತ್ತು ಬಂದಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮೀನುಗಾರಿಕೆಯಿಂದ ಜಲಚರಗಳು ಸಾವನ್ನಪ್ಪುತ್ತಿದ್ದು, ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

 

`ಸಮುದ್ರದಲ್ಲಿರುವ ಜೀವಿಗಳಿಗೆ ಹಾನಿಯಾಗುವ ಪ್ರಮಾಣದಲ್ಲಿ ನಡೆಯುತ್ತಿರುವ ಮೀನುಗಾರಿಕೆಯಿಂದ ಯಾರೊಬ್ಬರಿಗೂ ಲಾಭವಿಲ್ಲ~ ಎಂದು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಕಡಲ ವಿಭಾಗದ ಸಾಗರ ಜೀವ ವಿಜ್ಞಾನದ ಮುಖ್ಯಸ್ಥ ಧೀರೇಶ್ ಜೋಷಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry