ಶನಿವಾರ, ಅಕ್ಟೋಬರ್ 19, 2019
28 °C

ಜಲಜನಕ ಚಾಲಿತ ತ್ರಿಚಕ್ರ ವಾಹನ

Published:
Updated:
ಜಲಜನಕ ಚಾಲಿತ ತ್ರಿಚಕ್ರ ವಾಹನ

ನವದೆಹಲಿ (ಪಿಟಿಐ): ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆ ತಯಾರಿಸಿದ ವಿಶ್ವದ ಮೊಟ್ಟ ಮೊದಲ ಜಲಜನಕ ಚಾಲಿತ ಆಟೊರಿಕ್ಷಾ ಶೀಘ್ರದಲ್ಲಿಯೇ ದೆಹಲಿ ರಸ್ತೆಗಳಲ್ಲಿ ಸಂಚರಿಸಲಿದೆ.

ಈ ತ್ರಿಚಕ್ರ ವಾಹನ ಕಾರ್ಬನ್ ರಹಿತ ಇಂಧನ ಬಳಸುವುದರಿಂದ, ಪರಿಸರ ಮಾಲಿನ್ಯ ಕಡಿಮೆಯಾಗಲಿದೆ.  ಪರ್ಯಾಯ ಇಂಧನ ಬಳಕೆ ಜಾರಿಗೆ ತರುವ ಉಪಕ್ರಮದ ಅಂಗವಾಗಿ ಈ ತ್ರಿಚಕ್ರ ವಾಹನ `ಹೈಅಲ್ಫಾ~ ರೂಪಿಸಲಾಗಿದೆ ಎಂದು ಸಂಸ್ಥೆಯ ಆಟೊಮೊಟಿವ್ ವಿಭಾಗದ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ. ಈ ತ್ರೀಚಕ್ರ ವಾಹನದ ಬೆಲೆಯನ್ನು ಸಂಸ್ಥೆಯು ಪ್ರಕಟಿಸಿಲ್ಲ.

Post Comments (+)