ಜಲನಾಥ್ ಖಾನಲ್ ನೇಪಾಳ ಪ್ರಧಾನಿ

7

ಜಲನಾಥ್ ಖಾನಲ್ ನೇಪಾಳ ಪ್ರಧಾನಿ

Published:
Updated:

ಕಠ್ಮಂಡು (ಪಿಟಿಐ): ನೇಪಾಳದ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಜಲನಾಥ್ ಖಾನಲ್ ಅವರು ನೂತನ ಪ್ರಧಾನಿಯಾಗಿ ಗುರುವಾರ ನಡೆದ 17ನೇ ಸುತ್ತಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.  ಇದರಿಂದಾಗಿ ಹೊಸ ಸರ್ಕಾರ ರಚನೆ ಬಗ್ಗೆ ಕಳೆದ ಏಳು ತಿಂಗಳಿನಿಂದ ಉಂಟಾಗಿದ್ದ ಬಿಕ್ಕಟ್ಟು ಅಂತ್ಯಗೊಂಡಿದೆ. ಆಯ್ಕೆಗೆ ಮೊದಲು ಮಾವೊವಾದಿ ಮುಖಂಡ ಪ್ರಚಂಡ ಅವರು ಖಾನಲ್ ಪರ ಕಡೆ ಗಳಿಗೆಯಲ್ಲಿ ಕಣದಿಂದ ಹಿಂದೆ ಸರಿದರು.  ಒಟ್ಟು 601 ಸದಸ್ಯರ ಸಂಸತ್ತಿನಲ್ಲಿ ಚಲಾವಣೆಗೊಂಡ 557 ಮತಗಳ ಪೈಕಿ 60 ವರ್ಷದ ಖಾನಲ್ 368 ಮತಗಳಿಸಿದ್ದಾರೆ ಎಂದು ಸ್ಪೀಕರ್ ಪ್ರಕಟಿಸಿದರು.  ಮೂರನೇ ಅತಿ ದೊಡ್ಡ ಪಕ್ಷವಾಗಿದ್ದ ಖಾನಲ್ ಅವರ ಪಕ್ಷಕ್ಕೆ ಪ್ರಮುಖ ಪ್ರತಿಪಕ್ಷ ಮಾವೊವಾದಿ ಪಕ್ಷ ಬೆಂಬಲ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry