ಜಲಪರೀಕ್ಷೆಗೆ ತೆಂಗಿನಕಾಯಿ ಗುರುತೇ ಅನುಕೂಲ...

7
ಕೆಡಿಪಿ ಸಭೆಯಲ್ಲಿ ನೀರಿಗಾಗಿ ಬಿಸಿಬಿಸಿ ಚರ್ಚೆ

ಜಲಪರೀಕ್ಷೆಗೆ ತೆಂಗಿನಕಾಯಿ ಗುರುತೇ ಅನುಕೂಲ...

Published:
Updated:

ರಾಮನಗರ: ಕುಡಿಯುವ ನೀರಿನ ಪರಿ ಹಾರಕ್ಕೆ ಕಳೆದ ಹದಿನೈದು ದಿನಗಳಲ್ಲಿ ತಾಲ್ಲೂಕಿ ನಾದ್ಯಂತ 65 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಹಲವು ಕೊಳವೆ ಬಾವಿಗಳು ವಿಫಲವಾಗಿವೆ. ಇದರಿಂದ ಇಲಾಖೆಗೆ ಭಾರಿ ನಷ್ಟ ಉಂಟಾಗುತ್ತಿದೆ. ಇದಕ್ಕೆ ಜಲ ಪರೀಕ್ಷಕರ ವಿಫಲತೆಯೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ತಿಳಿಸಿದರು.ನಗರದ ಮಿನಿವಿಧಾನ ಸೌಧ ದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿ ರುವ ಕ್ರಮಗಳ ಬಗ್ಗೆ ಅವರು ತಿಳಿಸಿದರು.ತೆಂಗಿನ ಕಾಯಿ ಮೂಲಕ ಜಲ ಪರೀಕ್ಷೆ ನಡೆಸಿ ಕೊರೆಸಿರುವ ಬಹುತೇಕ ಕೊಳವೆ ಬಾವಿಗಳು ಸಫಲವಾಗಿವೆ. ಆದ್ದರಿಂದ ನಾವೂ ತೆಂಗಿನ ಕಾಯಿ ಮೂಲಕ ಜಲ ಪರೀಕ್ಷೆ ನಡೆಸಿ, ಕೊಳವೆ ಬಾವಿಗಳನ್ನು ತೋಡಿಸಿದರೆ ಹೆಚ್ಚು ಅನುಕೂಲ ವಾಗಲಿದೆ. ಜೊತೆಗೆ ಇಲಾಖೆಗೂ ಹಣ ಉಳಿತಾಯ ವಾಗಲಿದೆ. ಅಮೆರಿಕ ದೇಶದಲ್ಲೂ ತೆಂಗಿನ ಕಾಯಿ ಮೂಲಕ ಜಲ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.ಇದರಿಂದ ಸಿಟ್ಟುಗೊಂಡ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್. ಶಂಕ ರಯ್ಯ ಮಾತನಾಡಿ ಇದು ಕಾಕತಾ ಳೀಯವಷ್ಟೇ. ಅವೈಜ್ಞಾನಿಕ ವಾದ ಈ ವಿಚಾರವನ್ನು ನಂಬಲಸಾಧ್ಯ. ನಾವು ಎಂಜಿನಿಯರಿಂಗ್ ಪದವೀಧರರು. ಸರಕಾರಿ ಜಲ ಪರೀಕ್ಷಕರು ವೈಜ್ಞಾನಿ ಕವಾಗಿ ಪರೀಕ್ಷೆ ನಡೆಸುತ್ತಾರೆ. ಜೊತೆಗೆ ಅವರು ನೀಡಿದ ಅನುಮೋದನೆ ಮೇರೆಗೆ ಕೊಳವೆ ಬಾವಿ ತೋಡಿಸಲು ಸಾಧ್ಯ ಎಂದು ತಿಳಿಸಿದರು.ಅಗತ್ಯ ಬಿದ್ದರೆ ತೆಂಗಿನ ಕಾಯಿ ಮೂಲಕ ಜಲ ಪರೀಕ್ಷೆಗೆ ಮುಂದಾಗಿ. ನಂತರ ಜಲದ ಕೇಂದ್ರ ಬಿಂದುವನ್ನು ಸರಕಾರಿ ಜಲ ಪರೀಕ್ಷಕರ ಮೂಲಕ ಮರು ಪರೀಕ್ಷೆ ನಡೆಸಿ ಅನುಮೋದನೆ ಪಡೆಯಿರಿ. ಕೇತೋಹಳ್ಳಿ, ಸಂಗಬಸವನ ದೊಡ್ಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀರಾ ತೊಂದರೆಯಿದ್ದು, ಕೂಡಲೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.ತಾಲ್ಲೂಕು ಪಂಚಾಯಿತಿ ಸಾಮಾ ಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿ. ವೆಂಕಟರಂಗಯ್ಯ ಮಾತನಾಡಿ, ‘ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರಿನಲ್ಲಿ ಅವ್ಯವಸ್ಥೆ ಉಂಟಾಗಿದೆ. ಅನೇಕ ಸ್ಥಳೀಯ ಜನಪ್ರತಿನಿಧಿಗಳು ಟ್ಯಾಂಕರ್ಗಳ ಮಾಲೀಕರಾಗಿದ್ದು, ನೀರು ಪೂರೈಕೆ ಯಲ್ಲಿ ರಾಜಕೀಯ ಮಾಡುತ್ತಿ ದ್ದಾರೆ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಶಾಮೀಲಾಗಿ ಸುಳ್ಳು ಲೆಕ್ಕ ಬರೆದು, ಹಣ ಮಾಡುವುದನ್ನು ದಂದೆಯಾಗಿಸಿಕೊಂ ಡಿದ್ದಾರೆ ಎಂದು ಆರೋಪಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್ ಮಾತನಾಡಿ, ‘ಅನಿರೀಕ್ಷಿತವಾಗಿ ಗ್ರಾಮಗಳಿಗೆ ಕೊಳವೆ ಬಾವಿಗಳಿಂದ ನೀರಿನ ಪೂರೈಕೆ ಸ್ಥಗಿತಗೊಂಡಾಗ ಮಾತ್ರ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಬೇಕು. ಅನಗತ್ಯವಾಗಿ ಟ್ಯಾಂಕರ್ ನೀರನ್ನು ಪೂರೈಸಿದರೆ, ಅಂತಹವರಿಗೆ ಹಣ ಪಾವತಿ ಮಾಡುವುದಿಲ್ಲ ಎಂದು ಎಚ್ಚರಿಸಿದರು. ಇಂತಹ ಅಕ್ರಮಗಳು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದೂ ಸೂಚಿಸಿದರು.ಪಶುಸಂಗೋಪನೆ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದ ಕಾಲುಬಾಯಿ ಜ್ವರದಿಂದಾಗಿ ಕೆಂಗಲ್ ಜಾನುವಾರು ಜಾತ್ರೆಯನ್ನು ನಿಷೇಧಿಸಲಾಗಿದೆ. ಫೆಬ್ರುವರಿ ತಿಂಗಳಿಂದ ಮುನ್ನೆಚ್ಚರಿಕೆಯಾಗಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಉಚಿತ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಆರೋಗ್ಯ, ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಜಲಾನಯನ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮಾರ್ಚ್‌ ಅಂತ್ಯದೊಳಗೆ ಎಲ್ಲಾ ಇಲಾಖೆಗಳು, ತಮ್ಮ ಇಲಾಖೆಗಳ ಅಭಿವೃದ್ಧಿ, ಕಾರ್ಯಕ್ರಮ, ಖರ್ಚು ಹಾಗೂ ವೆಚ್ಚದ ಬಗ್ಗೆ ಸಮಗ್ರ ಅಂಕಿ ಅಂಶಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ.ಎಚ್.ವೆಂಕಟೇಶ್ ಉಪಸ್ಥಿತರಿದ್ದರು.ನೀರಿಗೆ ಜಗಳ: ಮಹಿಳೆ ಆತ್ಮಹತ್ಯೆ

ಬೆಂಗಳೂರು: ನಲ್ಲಿಯಲ್ಲಿ ನೀರು ಹಿಡಿ ದುಕೊಳ್ಳುವ ವಿಷಯವಾಗಿ ನೆರೆಹೊ ರೆಯವರೊಂದಿಗೆ ಜಗಳವಾಗಿದ್ದರಿಂದ ಬೇಸರಗೊಂಡ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡು ಗೊಂಡನಹಳ್ಳಿ ಸಮೀಪದ ಎ.ಕೆ.ಕಾಲೊ ನಿಯಲ್ಲಿ ಸೋಮವಾರ ನಡೆದಿದೆ.

ಎ.ಕೆ.ಕಾಲೊನಿ ನಿವಾಸಿ ಸುಬ್ರಮಣಿ ಎಂಬುವರ ಪತ್ನಿ ಸುನಿತಾ (38) ಆತ್ಮಹತ್ಯೆ ಮಾಡಿಕೊಂಡವರು.ಬೀದಿ ನಲ್ಲಿಯಲ್ಲಿ ನೀರು ಹಿಡಿದು ಕೊಳ್ಳುವ ವಿಷಯವಾಗಿ ಸುನಿತಾ ಮತ್ತು ಅವರ ಅಕ್ಕಪಕ್ಕದ ಮನೆಯವರ ನಡುವೆ ರಾತ್ರಿ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ನೆರೆಹೊರೆ ಯವರು ಅವರನ್ನು ಅವಾಚ್ಯ ಶಬ್ದಗ ಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇದರಿಂದ ಬೇಸರಗೊಂಡ ಅವರು ಮನೆಗೆ ಬಂದು ನೇಣು ಹಾಕಿಕೊಂ ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸಂದರ್ಭದಲ್ಲಿ ಸುನಿತಾ ಅವರ ಪತಿ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry