ಶುಕ್ರವಾರ, ಜೂನ್ 18, 2021
28 °C

ಜಲಮಂಡಲಿ ಗಮನಕ್ಕೆ

– ವೈ. ಆರ್‌. ರಮೇಶ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಯಲಹಂಕ ಓಲ್ಡ್ ಟೌನಿನ ಮಸೀದಿ ರಸ್ತೆ, ಬಿ.ಬಿ.ಎಂ.ಪಿ. ಕಚೇರಿ ಪಕ್ಕದ 2ನೇ ಅಡ್ಡರಸ್ತೆ ಮತ್ತು ಅದರ ಪಕ್ಕದ 3ನೇ ಅಡ್ಡರಸ್ತೆಯಲ್ಲಿ ಒಳಚರಂಡಿ ಪೈಪ್‌ಲೈನ್‌ ಹಾಕಿರುವುದಿಲ್ಲ. ಇತರ ಎಲ್ಲಾ ರಸ್ತೆಗಳಿಗೂ ಪೈಪ್‌ಲೈನ್‌ ಒಳಚರಂಡಿ ಸಂಪರ್ಕ ಇರುತ್ತದೆ. ಈ ರಸ್ತೆಗಳಿಗೆ ಒಳಚರಂಡಿ ಸಂಪರ್ಕ ಇಲ್ಲದೆ ಇರುವುದರಿಂದ ಎಲ್ಲರೂ ಕೊಳಚೆ ನೀರನ್ನು ಚರಂಡಿಗೆ ಬಿಟ್ಟಿರುತ್ತಾರೆ. ಜಲಮಂಡಲಿಯವರು ಒಳಚರಂಡಿ ಸಂಪರ್ಕ ಕಲ್ಪಿಸಬೇಕೆಂದು ಕೋರುತ್ತೇನೆ.– ವೈ. ಆರ್‌. ರಮೇಶ್‌ ಕುಮಾರ್‌ಮೂಲಭೂತ ಸೌಕರ್ಯ ಒದಗಿಸಿ


ವಿದ್ಯುತ್‌ ಸಂಪರ್ಕ ಬಿಟ್ಟು ಬೇರೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದಂತಹ ಪ್ರದೇಶ ಬೆಂಗಳೂರಿನಿಂದ ಕೇವಲ 35 ಕಿ.ಮೀ. ಅಂತರದಲ್ಲಿ ಇದೆಯೆಂದರೆ ನೀವು ನಂಬಲೇಬೇಕು. ನಗರ ಸಭೆ ಎನ್ನುವ ನೆಪ ಮಾತ್ರ ಸಂಸ್ಥೆಯ ಹೊಸಕೋಟೆಯಲ್ಲಿದೆ. ಆದರೆ ನಗರಸಭೆ ಇರುವ ಯಾವುದೇ ಲಕ್ಷಣಗಳು ಹೊಸಕೋಟೆಯಲ್ಲಿ ಕಾಣುವುದಿಲ್ಲ.ಹೊಸಕೋಟೆಯ ವಿನಾಯಕ ನಗರದ 4ನೇ ಕ್ರಾಸ್‌ನ ಕೊನೆಯ ಭಾಗದ ಪಾಪಣ್ಣ ಲೇ ಔಟ್‌ ಎನ್ನುವ ಹಳೆಯ (1992) ಲೇ ಔಟ್‌ನಲ್ಲಿಯೂ ದುಸ್ಥಿತಿಯನ್ನು ಕಾಣಬಹುದು. ಸಂಜೆ 6 ಗಂಟೆ ಮೇಲೆ ರಸ್ತೆಗಳಲ್ಲಿ ಹಾವು – ನಾಯಿಗಳ ಹಾವಳಿ, ಚರಂಡಿ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಈವರೆಗೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದಿನಬಳಕೆಯ ನೀರು ಟ್ಯಾಂಕರ್‌ಗಳದ್ದೇ (ಖಾಸಗಿ) ಕಾರುಬಾರು. ಬೀದಿ ದೀಪ ಕೂಡ ಇಲ್ಲವೇ ಇಲ್ಲ.ಯಾವುದೇ ರೀತಿಯ ಸರ್ಕಾರಿ ಸವಲತ್ತುಗಳು ಲಭ್ಯವಿಲ್ಲ. ರಸ್ತೆಯಂತೂ ಗ್ರಾಮಾಂತರ ಪ್ರದೇಶಕ್ಕಿಂತಲೂ ತೀರ ಕಳಪೆ. ಕೆ.ಎಸ್‌.ಆರ್.ಟಿ.ಸಿ. ಬಸ್ಸುಗಳು, ಬೆಂಗಳೂರು ಬಸ್‌ ನಿಲ್ದಾಣದಿಂದ ಸಂಜೆ 6.30ರ ನಂತರ ಹೊರಡುವಂತಹವು ಇಲ್ಲಿ ನಿಲ್ಲಿಸುವ ವಿಷಯದಲ್ಲಿ ತಕರಾರು ತೆಗೆಯುವುದು ಸಾಮಾನ್ಯ.

ದಯಮಾಡಿ ಹೊಸಕೋಟೆಯನ್ನು ಗ್ರಾಮವೆಂದು ಘೋಷಿಸಿದಲ್ಲಿ ಕನಿಷ್ಠ ಸವಲತ್ತುಗಳಾದರೂ ಸಿಗಬಹುದೇನೋ?– ಸುಗಟೂರು ಮಂಜುನಾಥಫಲಕ ಹಾಕಿಸಿ


ಕರ್ನಾಟಕ ಗೃಹಮಂಡಳಿಯು ಸವಿಸ್ತಾರವಾಗಿ ಯಲಹಂಕ ಬಳಿ ಉಪನಗರವನ್ನು (1 ರಿಂದ 5 ಹಂತಗಳಲ್ಲಿ) ನಿರ್ಮಿಸಿದೆ. ಆದರೆ ಅದರ ದ್ವಾರಗಳಲ್ಲಿ ‘ಯಲಹಂಕ ಉಪನಗರಕ್ಕೆ ಸ್ವಾಗತ’ ಎಂಬ ಫಲಕದ ಕಮಾನು ಇಲ್ಲ. ದಯಮಾಡಿ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಸೂಕ್ತ.–ರಾಂನಗರ ದೇವ್ರಾಜ್‌, ಡಿ.ವಿ.ಕೃಷ್ಣಹೆಬ್ಬಾಳ ವರ್ತುಲ ರಸ್ತೆ ಮೂಲಕ ಸಂಚರಿಸಲಿ


ಯಲಹಂಕದಿಂದ ಕೆಂಪೇಗೌಡ ಬಸ್‌ ನಿಲ್ದಾಣ, ಶಿವಾಜಿನಗರ ಮತ್ತು ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಹೊರಡುವ ನಗರ ಸಾರಿಗೆ ಬಸ್‌ಗಳನ್ನು ಹೆಬ್ಬಾಳ ವರ್ತುಲ ರಸ್ತೆಯ ಸರ್ಕಲ್‌ ಮೂಲಕ ಹಾದು ಹೋಗುವಂತೆ ಮಾಡಬೇಕಿದೆ. ಇದರಿಂದ ಯಲಹಂಕ ಕಡೆಯಿಂದ ಹೆಬ್ಬಾಳ ವರ್ತುಲ ರಸ್ತೆಗೆ ಬರುವ ಪ್ರಯಾಣಿಕರಿಗೆ ಹಾಗೂ ವರ್ತುಲ ರಸ್ತೆ ಕಡೆಯಿಂದ ಮೆಜೆಸ್ಟಿಕ್‌, ಕೃಷ್ಣರಾಜ ಮಾರುಕಟ್ಟೆ ಮತ್ತು ಶಿವಾಜಿನಗರದ ಕಡೆಗೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.ಈಗ ವರ್ತುಲ ರಸ್ತೆ ಕಡೆಯಿಂದ ನಗರದ ವಿವಿಧ ಭಾಗಗಳಿಗೆ ಹೊರಡುವ ಪ್ರಯಾಣಿಕರು ಕಿರಿದಾದ ದಾರಿಯಲ್ಲಿ ಸಾಗಿ ರೈಲ್ವೆ ಹಳಿಗಳನ್ನು ದಾಟಿ ಸುಮಾರು ಅರ್ಧ ಕಿ.ಮೀ. ನಡೆದು ಹೆಬ್ಬಾಳ ಬಸ್‌ ನಿಲ್ದಾಣದ ಮೂಲಕ ಹೋಗಬೇಕಾಗಿದೆ. ಇದರಿಂದ ವೃದ್ಧರು, ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದೆರೆಯಾಗುತ್ತಿದೆ.ಆದ್ದರಿಂದ ಯಲಹಂಕ ಕಡೆಯಿಂದ ಬೆಂಗಳೂರು ನಗರ ತಲುಪುವ ಎಲ್ಲಾ ನಗರ ಸಾರಿಗೆ ಬಸ್‌ಗಳನ್ನು ಹೆಬ್ಬಾಳ ವರ್ತುಲ ರಸ್ತೆ (ಕೆಳಭಾಗದ) ಸರ್ಕಲ್‌ ಮೂಲಕ ಸಂಚರಿಸುವಂತೆ ಮಾಡಬೇಕೆಂದು ಮಹಾನಗರ ಸಾರಿಗೆ ಸಂಸ್ಥೆಗೆ ಈ ಮೂಲಕ ಮನವಿ.– ಹೆಬ್ಬಾಳ ಎಂ. ಮಂಜುನಾಥ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.