ಜಲಮಂಡಳಿಯಲ್ಲಿ ನೀರಿನ ಹಣ ದುರ್ಬಳಕೆ

7

ಜಲಮಂಡಳಿಯಲ್ಲಿ ನೀರಿನ ಹಣ ದುರ್ಬಳಕೆ

Published:
Updated:

ಬೆಂಗಳೂರು: ನೀರು ಮತ್ತು ಒಳ­ಚರಂಡಿ ಸೌಲಭ್ಯ ಕಲ್ಪಿಸುವ ಸಲು­ವಾಗಿ ಸಾರ್ವ­ಜನಿಕರು   ಜಲಮಂಡ­ಳಿಗೆ ಪಾವತಿಸುವ ಹಣವನ್ನು  ಕೆಲವು ಸಿಬ್ಬಂದಿ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈಗಾಗಲೇ ಮಂಡಲಿ ಕ್ರಮಕ್ಕೆ ಮುಂದಾಗಿದೆ ಎಂದು ಮಂಡ­ಳಿಯ ಅಧ್ಯಕ್ಷ ಎಂ.ಎಸ್‌.­ರವಿಶಂಕರ್‌ ತಿಳಿಸಿದ್ದಾರೆ.ಈ ಬಗ್ಗೆ ಮಂಡಲಿಯ  ಲೆಕ್ಕಾಧಿ­ಕಾರಿ (ಕಂದಾಯ) ನೇತೃತ್ವದ ತಂಡ ಪ್ರಾಥ­ಮಿಕ ತನಿಖೆ ನಡೆಸಿದ್ದು,  ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸಹಾಯಕ ಮಾರುತಿ ಪುರ್ಲಿ ಅವರನ್ನು ನ.30­ರಂದು ಸೇವೆಯಿಂದ ಬಿಡುಗಡೆ ಮಾಡ­ಲಾಗಿದೆ. ಮಂಡಳಿಯ ಜಲಪರಿ­­ವೀಕ್ಷಕ ಲಕ್ಷ್ಮಣ್‌ ನಾಯಕ್‌ ಅವರನ್ನು ಸೇವೆಯಿಂದ ಅಮಾನತು ಮಾಡ­ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry