ಜಲಮಾರ್ಗದಲ್ಲಿ ಕಲ್ಲಿದ್ದಲು ಸಾಗಣೆ ₹10 ಸಾವಿರ ಕೋಟಿ ಉಳಿತಾಯ

7

ಜಲಮಾರ್ಗದಲ್ಲಿ ಕಲ್ಲಿದ್ದಲು ಸಾಗಣೆ ₹10 ಸಾವಿರ ಕೋಟಿ ಉಳಿತಾಯ

Published:
Updated:

ನವದೆಹಲಿ (ಪಿಟಿಐ): ಜಲಸಾರಿಗೆ ಮೂಲಕ ಕಲ್ಲಿದ್ದಲು ಸಾಗಿಸುವುದರಿಂದ ವರ್ಷಕ್ಕೆ ಕನಿಷ್ಠ ₹10 ಸಾವಿರ ಕೋಟಿ ಉಳಿತಾಯ ಮಾಡಬಹುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಶನಿವಾರ ತಿಳಿಸಿದರು.ಸಾಗಣೆ ವೆಚ್ಚ ಕಡಿಮೆ ಮಾಡಲು ಒಳನಾಡಿನ ಜಲಸಾರಿಗೆ ವ್ಯವಸ್ಥೆ ನೆರವಾಗುತ್ತದೆ. ಇದರಿಂದ ದೇಶದಲ್ಲಿ ಒಳನಾಡ ಸಾರಿಗೆ ಮೂಲಕ ಪ್ರಯಾಣಿಸುವವರ ಸಂಖ್ಯೆ ಮತ್ತು ಸರಕುಗಳ ಸಾಗಣೆ ಪ್ರಮಾಣ ಹೆಚ್ಚಾಗಲಿದೆ ಎಂದರು.ದೇಶದ 111 ನದಿಗಳನ್ನು ರಾಷ್ಟ್ರೀಯ ಜಲಸಾರಿಗೆಗಳನ್ನಾಗಿ ಪರಿವರ್ತಿಸುವ ಮಸೂದೆಗೆ  ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಅನುಮತಿ ಪಡೆಯುವ ವಿಶ್ವಾಸವಿದೆ ಎಂದರು. ಶನಿವಾರ  ವಾಣಿಜ್ಯೋದ್ಯಮ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸರಕು ಸಾಗಣೆಗೆ ಜಲಸಾರಿಗೆ ಅಗ್ಗವಾಗಿದ್ದು, ಪರಿಸರ ಸ್ನೇಹಿ ಮಾಧ್ಯಮವಾಗಿದೆ ಎಂದರು.‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಬಂದರು ವಲಯದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಲಾಗಿದೆ. ಈ ವರ್ಷ ₹6 ಸಾವಿರ ಕೋಟಿ ಲಾಭಗಳಿಸುವ ನಿರೀಕ್ಷೆ ಇದೆ. ಈ ಹಣವನ್ನು ಅಭಿವೃದ್ಧಿಗೆ ಉತ್ತೇಜನ ನೀಡುವ ಕಾರ್ಯಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry