ಸೋಮವಾರ, ಜೂನ್ 21, 2021
27 °C

ಜಲಾಂತರ್ಗಾಮಿಯಲ್ಲಿ ಅಪಘಾತ: ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ನೌಕಾಪಡೆ ಪೂರ್ವ ವಿಭಾಗದ ಹಡಗುಕಟ್ಟೆ­ಯಲ್ಲಿ ನಿರ್ಮಾಣ ಹಂತದ­ಲ್ಲಿರುವ ಅಣ್ವಸ್ತ್ರ ಜಲಾಂತರ್ಗಾಮಿಯಲ್ಲಿ ಸಂಭ­ವಿಸಿದ ಅಪ­ಘಾತದಲ್ಲಿ ಒಬ್ಬ ಕಾರ್ಮಿಕ ಸತ್ತಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಹಡಗುಕಟ್ಟೆಯ 5ನೇ ಕಟ್ಟಡದಲ್ಲಿ ಜಲಾಂತ­ರ್ಗಾಮಿಯ ಹೈಡ್ರಾಲಿಕ್‌ ಟ್ಯಾಂಕ್‌ನ ಒತ್ತಡವನ್ನು ಪರೀಕ್ಷೆ ಮಾಡು­ತ್ತಿದ್ದಾಗ ಟ್ಯಾಂಕ್‌್ ಮುಚ್ಚಳ ಸಿಡಿದು ಕಾರ್ಮಿಕರಿಗೆ ಬಡಿದಿದ್ದರಿಂದ ಈ ಅನಾ­ಹುತ ಸಂಭವಿಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ಅವಿನಾಶ್‌­ಚಂದ್ರ ತಿಳಿಸಿದ್ದಾರೆ.ಅಪಘಾತದಲ್ಲಿ ಸತ್ತ ಹಾಗೂ ಗಾಯ­ಗೊಂಡ ಕಾರ್ಮಿಕರು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಸೇರಿ­ದವರು. ಸತ್ತ ಕಾರ್ಮಿಕ­ನನ್ನು ಅಮರ್ (24) ಎಂದು ಗುರುತಿಸ­ಲಾಗಿದ್ದು, ಅಮ್ಜದ್‌ ಖಾನ್‌ ಮತ್ತು ವಿಷ್ಣು ಎಂಬವರು ತೀವ್ರ­ವಾಗಿ ಗಾಯ­ಗೊಂಡಿದ್ದಾರೆ ಎಂದು ಪೊಲೀಸ್ ಮೂಲ­ಗಳು ತಿಳಿಸಿವೆ.ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿ­ಸ­ಲಾ­ಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿ­ಸಲಾಗಿದೆ ಎಂದು ತಿಳಿಸಿ­ರುವ ಅವಿನಾಶ್‌ಚಂದ್ರ, ಈ ಘಟನೆಯು ಜಲಾಂತರ್ಗಾಮಿ ನಿರ್ಮಾಣ ಯೋಜ­ನೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟ­ಪಡಿಸಿದ್ದಾರೆ.ಮುಂಬೈ ಮಜಗಾಂವ್‌ ಹಡಗುಕಟ್ಟೆ­ಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ಯುದ್ಧ ಹಡಗಿನಲ್ಲಿ ವಿಷಾನಿಲ ಸೋರಿಕೆ ಉಂಟಾಗಿ ಕಮಾಂಡರ್‌ ಒಬ್ವರು ಅಸು ನೀಗಿದ ಮಾರನೇ ದಿನವೇ ಇಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.ನೌಕಾಪಡೆಗೆ ಸೇರ್ಪಡೆಯಾಗ ಬೇಕಿ­ರುವ ನಿರ್ಮಾಣ ಹಂತದಲ್ಲಿ ಇರುವ ಯುದ್ಧ ಹಡಗು­ಗಳಲ್ಲಿ ಇತ್ತೀಚಿನ ದಿನ­ಗಳಲ್ಲಿ 12 ಅವಘಡಗಳು  ಸಂಭವಿಸಿವೆ. 10 ದಿನಗಳ ಹಿಂದೆ ಐಎನ್‌ಎಸ್‌ ಸಿಂಧು­ರತ್ನ ಯುದ್ಧ ಹಡಗಿನಲ್ಲಿ ಸಂಭವಿ­ಸಿದ ದುರಂತದಲ್ಲಿ ಇಬ್ಬರು ಅಧಿಕಾರಿ­ಗಳು ಮೃತಪಟ್ಟಿದ್ದರಿಂದ ನೈತಿಕ ಹೊಣೆ ಹೊತ್ತು ನೌಕಾದಳ ಮುಖ್ಯಸ್ಥ ಅಡ್ಮಿ­ರಲ್‌ ಡಿ.ಕೆ. ಜೋಶಿ ರಾಜೀನಾಮೆ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.