ಭಾನುವಾರ, ಮೇ 22, 2022
26 °C

ಜಲಾನಯನ ನಿರ್ವಹಣೆಗೆ ನೀಲನಕ್ಷೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ:  ಜಿಲ್ಲಾ ಜಲಾನಯನ ಅಭಿವೃದ್ದಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ 4ನೇ ಹಂತದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಗೆ ನೀಲನಕಾಶೆ ಸಿದ್ಧಪಡಿಸಿದೆ.ಮಡಿಕೇರಿ ತಾಲ್ಲೂಕಿನ ಮೊಣ್ಣಂಗೇರಿ, ಬೆಟ್ಟತ್ತೂರು, ಮದೆ, ಕಾಟಗೇರಿ, ಕರ್ಣಂಗೇರಿ, ಎರವನಾಡು, ಮೇಕೇರಿ, ಅರವತ್ತೊಕ್ಲು ಗ್ರಾಮಗಳನ್ನು ಸ್ಯಾಟಲೈಟ್ ಮೂಲಕ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಗೆ ಆಯ್ಕೆ ಮಾಡ ಲಾಗಿದೆ ಎಂದು ಜಿಲ್ಲಾ ಜಲಾನಯನ ಅಭಿವೃದ್ದಿ ಇಲಾಖೆ ಅಧಿಕಾರಿ ತಿರುಮಲೇಶ್ ಅವರು ಮಾಹಿತಿ ನೀಡಿದರು.3ನೇ ಹಂತದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಕೈಗೊಂಡಿ ರುವ ಯೋಜನೆಗಳು ನಾಕೂರು ಶಿರಂಗಾಲ, ಹರದೂರು, ಕೆದಕಲ್, ಮಾದಾಪುರ, ಸುಂಟಿಕೊಪ್ಪ, ಕಂಬಿಬಾಣೆ, ಚೆಟ್ಟಳ್ಳಿ, ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಕದನೂರು, ಹಾಲುಗುಂದ, ಕಾಕೋಟು ಪರಂಬು, ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿವೆ.ಜಿಲ್ಲಾ ವಲಯ

ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ: ಜಿಲ್ಲೆಯ 8 ಗ್ರಾಮ ಪಂಚಾಯಿತಿಗಳಲ್ಲಿ 15 ಕಿರುಜಲಾನಯನಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮುದಾಯ ಸಂಘಟನೆ, ಸ್ವಸಹಾಯ ಗುಂಪು, ರೈತ ಗುಂಪು, ಹಾಗೂ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ.ಕಿರುಜಲಾನಯನ ಯೋನೆಯನ್ನು ಅನುಷ್ಠಾನಗೊಳಿಸಲು 2012-13ನೇ ಸಾಲಿನಲ್ಲಿ 120.69ಲಕ್ಷ ರೂಪಾಯಿಗಳನ್ನು ಒದಗಿಸಲಾಗಿದೆ. ಈ ಮೊತ್ತದಲ್ಲಿ ರೂ.92.68 ಲಕ್ಷಗಳಲ್ಲಿ 55 ಕೃಷಿ ಹೊಂಡಗಳು, 170.56ಹೆಕ್ಟೇರ್ ಪ್ರದೇಶದಲ್ಲಿ ತೊಟ್ಟಿಲುಗುಂಡಿ,  2 ಕಿಂಡಿ ಅಣೆಕಟ್ಟು ಕಾಮಗಾರಿಯನ್ನು, ತೋಟಗಾರಿಕಾ ಘಟಕದಡಿ 16138 ತೆಂಗಿನ ಸಸಿಗಳ ವಿತರಣೆಗಾಗಿ ರೂ.4.50ಲಕ್ಷ ವೆಚ್ಚ ಮಾಡಲಾಗಿದೆ.ಅರಣ್ಯ ಘಟಕದಡಿ 66600 ಸಿಲ್ವರ್ ಸಸಿಗಳನ್ನು 160 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ರೂ.7.50 ಲಕ್ಷ ವೆಚ್ಚ ಮಾಡಲಾಗಿದೆ.  ರೂ.105. 32ಲಕ್ಷ ವೆಚ್ಚ ಮಾಡಲಾಗಿದೆ.ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಯೋಜನೆ:

ವಿರಾಜಪೇಟೆ ತಾಲ್ಲೂಕಿನ 3 ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಕಿರು ಜಲಾನ ಯನ ಉಪಸಮಿತಿಗಳಲ್ಲಿ ಮಂಜೂರಾದ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. 2012-13ನೇ ಸಾಲಿನಲ್ಲಿ ರೂ. 18.806 ಲಕ್ಷ ಅನುದಾನ ಒದಗಿಸಿದ್ದು, ಇದರಲ್ಲಿ 27.50ಹೆ. ಪ್ರದೇಶದಲ್ಲಿ ತೊಟ್ಟಿಲುಗುಂಡಿ ಕಾಮಗಾರಿ, 6 ಕೃಷಿ ಹೊಂಡ ಕಾಮಗಾರಿ ಮತ್ತು 28 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಸಿಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಟ್ಟು ರೂ.17.426 ಲಕ್ಷಗಳಿಗೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಮಗ್ರ ಜಲಾನಯನ ನಿರ್ವಹಣೆ ಯೋಜನೆ:

2012-13ನೇ ಸಾಲಿಗೆ ಮಡಿಕೇರಿ ತಾಲ್ಲೂಕಿಗೆ ರೂ.170 ಲಕ್ಷ ಅನುದಾನ ಲಭ್ಯವಿದ್ದು, ಕೃಷಿ ಘಟಕದಡಿ ಕೃಷಿಹೊಂಡ, ತೊಟ್ಟಿಲುಗುಂಡಿ, ತೋಟಗಾರಿಕಾ ಘಟಕದಡಿ  ತರಕಾರಿ ಕಿರುಚೀಲಗಳನ್ನು ಹಾಗೂ ಅರಣ್ಯ ಘಟಕದಡಿ ಸಿಲ್ವರ್ ಸಸಿಗಳನ್ನು ವಿತರಿಸಲಾಗಿದೆ.ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳಲ್ಲಿ ಪ್ರವೇಶದ್ವಾರ ಚಟುವಟಿಕೆಗೆ ರೂ.55.81ಲಕ್ಷಗಳ ಅನುದಾನ ಲಭ್ಯವಿದ್ದು ಇದರಲ್ಲಿ 13 ಸೋಲಾರ್ ಬೀದಿ ದೀಪಗಳು, 1480 ತರಕಾರಿ ಕಿರುಚೀಲ ಗಳನ್ನು ತೋಟಗಾರಿಕಾ ಘಟಕದಡಿ ವಿತರಣೆ ಮಾಡಲಾಗಿದೆ. ಅರಣ್ಯ ನರ್ಸರಿ ಮತ್ತು ಕೃಷಿ ಘಟಕದಡಿ ಕಿಂಡಿಅಣೆ ಹಾಗೂ ಕಿಂಡಿಅಣೆಗೆ ಮೇಲು ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸಚಿವರಿಂದ ಕುಂದುಕೊರತೆ ವಿಚಾರಣೆ ನಾಳೆ

ಮಡಿಕೇರಿ: ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಜು.9ರಂದು ಮಧ್ಯಾಹ್ನ 2.30ಗಂಟೆಗೆ ಗೋಣಿಕೊಪ್ಪಲಿನ ಆರ್.ಎಂ.ಸಿ (ಎಪಿಎಂಸಿ) ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.