ಜಲಾಶಯ ಭರ್ತಿ: ನದಿಗೆ ನೀರು

ಸೋಮವಾರ, ಮೇ 27, 2019
29 °C

ಜಲಾಶಯ ಭರ್ತಿ: ನದಿಗೆ ನೀರು

Published:
Updated:

ಹುಣಸಗಿ: ಸಮೀಪದ ನಾರಾಯಣಪುರ ಜಲಾಶಯದಲ್ಲಿ 28 ಟಿ.ಎಂ.ಸಿ ನೀರಿನ ಸಂಗ್ರಹವಾಗಿದ್ದು ಇನ್ನೂ ಕೇಲವ 5 ಟಿ.ಎಂಸಿ ಮಾತ್ರ ಬಾಕಿ ಸಂಗ್ರವಾಗಬೇಕ್ದ್ದಿದು ಯಾವದೇ ಸಂದರ್ಭದಲ್ಲಿ ಭರ್ತಿಯಾಗಲಿದೆ. ಆಲಮಟ್ಟಿ ಜಲಾಶಯದಲ್ಲಿ 518.44 ಅಡಿ ನೀರಿನ ಸಂಗ್ರವಿದ್ದು 124 ಟಿಎಂಸಿ ನಿರಿನ ಸಾಂರ್ಥದಲ್ಲಿ ಮಂಗಳವಾರ 104 ಟಿಎಂಸಿ ನೀರು ಸಂಗ್ರವಾಗಿದ್ದು ಸುಮಾರು 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಲಿದೆ ಎಂದು ತಿಳಿದು ಬಂದಿದೆ.ಅದರಂತೆ ನಾರಾಯಣಪುರ ಜಲಾಶಯಕ್ಕೆ 31 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟ 492.25 ಇರಬೇಕಾಗಿದ್ದು, ಸಧ್ಯ 491.40 ಇದೆ.ಮಂಗಳವಾರ ಸಾಯಂಕಾಲ ಕೃಷ್ಣಾ ನದಿಗೆ ಸುಮಾರು 5000 ಕ್ಯೂಸೆಕ್ ನೀರು ಹರಿಬಿಡಲಾಗಿದೆ.

ಯಾವದೇ ಸಂದರ್ಭದಲ್ಲಿ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡಲಾಗುವದು ನದಿ ಪಾತ್ರದಲ್ಲಿನ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಡ್ಯಾಂ ಡಿವಿಜನ್ ಅಧಿಕಾರಿಗಳು ತಿಳಿಸಿದ್ದಾರೆ.ನಂತರ ಈಗಾಗಲೇ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದ್ದು ರೈತರು ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry