ಭಾನುವಾರ, ಏಪ್ರಿಲ್ 11, 2021
22 °C

ಜಲ್ಲಿ ಕ್ರಷರ್‌ಗಳಿಗೆ ಕಾನೂನಿನ ರಕ್ಷಣೆ: ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಯ ನಿರ್ದೇಶಕ ಡಾ.ವಿ.ಪ್ರಕಾಶ್ ಮಂಗಳವಾರ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.ಇವರು ಕಳೆದ 16 ವರ್ಷಗಳಿಂದ ಸಂಸ್ಥೆಯ ನಿರ್ದೇಶಕರಾಗಿದ್ದರು. ಇನ್ನು ಕೇವಲ ಆರು ತಿಂಗಳ ಸೇವಾ ಅವಧಿ ಇತ್ತು.ವೈಯಕ್ತಿಕ ಕಾರಣದಿಂದಾಗಿ ಐದಾರು ತಿಂಗಳಿಂದ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದರು. ಆದರೆ ಸಂಸ್ಥೆಯ ವಜ್ರ ಮಹೋತ್ಸವ ಇದ್ದ ಕಾರಣ ಇವರ ಮನವಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆತಿರಸ್ಕರಿಸಿತ್ತು. ಮಾರ್ಚ್ 7 ರಂದು ಇವರ ಸ್ವಯಂ ನಿವೃತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಒಪ್ಪಿಗೆ ಸೂಚಿಸಿದೆ. ಸಂಸ್ಥೆಗೆ ಹೊಸ ನಿರ್ದೇಶಕರು ನೇಮಕಗೊಳ್ಳುವ ತನಕ ಡಾ.ಜಿ.ವೆಂಕಟೇಶ್ವರ ರಾವ್ ಪ್ರಭಾರ ನಿರ್ದೇಶಕರಾಗುತ್ತಾರೆ.ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸ್ವಯಂ ನಿವೃತ್ತಿ ವಿಷಯವನ್ನು ತಿಳಿಸಿದ ಅವರು, ’ಮುಂದಿನ ದಿನಗಳಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ), ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ  ಜೊತೆ ಕೆಲಸ ಮಾಡುತ್ತೇನೆ. ಪೌಷ್ಟಿಕತೆ ಮತ್ತು ಪೋಷಣೆ, ಸಾಂಪ್ರದಾಯಿಕ ಆಹಾರ, ಆರೋಗ್ಯ ಕುರಿತಂತೆ ಆರು ಪುಸ್ತಕಗಳನ್ನು ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.  ನಮ್ಮಲ್ಲಿ ಸಾಂಪ್ರದಾಯಿಕ ಆಹಾರಗಳನ್ನು ಕಡೆಗಣಿಸಲಾಗಿದೆ. ಆಹಾರದಲ್ಲಿ ಔಷಧೀಯ ಗುಣ ಇರಬೇಕೆ ಹೊರತು, ಮಾತ್ರೆಗಳಲ್ಲಿ ಅಲ್ಲ. ನಮ್ಮ ಪುದಿನ ಚಟ್ನಿಯಲ್ಲಿ ಔಷಧೀಯ ಗುಣವಿದೆ. ಅದರ ಮೌಲ್ಯ   ವನ್ನು ತಿಳಿದು  ಕೊಳ್ಳಬೇಕು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.