ಭಾನುವಾರ, ಏಪ್ರಿಲ್ 18, 2021
23 °C

ಜಲ್ಲಿ ಕ್ರಷರ್‌ಗಳಿಗೆ ಜೀವದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯಮ ಸಡಿಲಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿರ್ಧರಿಸಿರುವ ಕಾರಣ, ರಾಜ್ಯದ ಅಂದಾಜು ಮೂರು ಸಾವಿರ ಜಲ್ಲಿ ಕ್ರಷರ್ ಮಾಲೀಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.ಸುರಕ್ಷಿತ ವಲಯಗಳಿಗೆ ಸ್ಥಳಾಂತರಗೊಳ್ಳಲು ಒಪ್ಪುವ ಜಲ್ಲಿ ಕ್ರಷರ್ ಘಟಕಗಳಿಗೆ ಚಟುವಟಿಕೆ ಪುನರಾರಂಭಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಿ ಮಂಡಳಿ ಶುಕ್ರವಾರ ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ. ಕಳೆದ ಒಂದು ವರ್ಷದಿಂದ ಈ ಘಟಕಗಳಲ್ಲಿ ನಿಷೇಧ ಹೇರಲಾಗಿತ್ತು.ಸರ್ಕಾರದ ರಚಿಸಿದ್ದ ಜಿಲ್ಲಾ ಮಟ್ಟದ ಕಾರ್ಯಪಡೆ, ರಾಜ್ಯದಲ್ಲಿ ಒಟ್ಟು 120 ಸುರಕ್ಷಿತ ವಲಯಗಳನ್ನು ಗುರುತಿಸಿದೆ. ಸ್ಥಳಾಂತರಗೊಳ್ಳಲು ಒಪ್ಪಿರುವ ಘಟಕಗಳಿಗೆ ಹಾಲಿ ಇರುವ ಜಾಗದಲ್ಲೇ ಕಲ್ಲು ಪುಡಿ ಮಾಡಲು ಮೂರು ತಿಂಗಳ ಅವಧಿಗೆ ಅವಕಾಶ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ `ಪ್ರಜಾವಾಣಿ~ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.