ಜಲ ಸಂವರ್ಧನೆಗೆ 76 ಕೆರೆ ಆಯ್ಕೆ

7

ಜಲ ಸಂವರ್ಧನೆಗೆ 76 ಕೆರೆ ಆಯ್ಕೆ

Published:
Updated:ಸಾಗರ: ಕೇಂದ್ರ ಸರ್ಕಾರ ಜಲ ಮರುಪೂರಣ ಯೋಜನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ತಾಲ್ಲೂಕಿನಲ್ಲಿ ಜಲ ಸಂವರ್ಧನೆಗೆ 76 ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ  ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ತಾಲ್ಲೂಕಿನ ಹೊಸಗುಂದ ಗ್ರಾಮದಲ್ಲಿ ಉಮಾಮಹೇಶ್ವರ ಜಲಸಂವರ್ಧನ ಕೆರೆ ಬಳಕೆದಾರರ ಸಂಘ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ್ಙ 12 ಲಕ್ಷ  ವೆಚ್ಚದಕೆರೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಗ್ರಾಮಗಳಲ್ಲಿ ನಲುಗುತ್ತಿರುವ ಕೆರೆಗಳ ಪುನಶ್ಚೇತನ ಮಾಡುವ ಮೂಲಕ ನೀರಿನ ಸಮರ್ಪಕ ಬಳಕೆಯಾಗಬೇಕಿದೆ. ಕೆರೆಗಳನ್ನು ಉಳಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ನೀರಿನ ಮೂಲವನ್ನೇ ನಾವು ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಹೇಳಿದರು.ಯಂತ್ರಗಳ ನೆರವಿಲ್ಲದೇ ಈ ಹಿಂದೆ ನಿರ್ಮಿಸಿದ ಕೆರೆಗಳು ಸುಸ್ಥಿತಿಯಲ್ಲಿವೆ.ಆದರೆ, ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಯಂತ್ರ ಬಳಸಿ ನಿರ್ಮಿಸಿದ ಕೆರೆಕಟ್ಟೆಗಳು ಬೇಗ ದುಸ್ಥಿತಿಗೆ ತಲುಪುತ್ತಿವೆ. ಇದರ ಅರ್ಥ ಕಾಮಗಾರಿಯ ಗುಣಮಟ್ಟ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದಾಗಿದೆ

 

ಗ್ರಾಮಸ್ಥರು ಆಯಾ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ನಿಗಾ ವಹಿಸದೇ ಇದ್ದರೆ ಸರ್ಕಾರದ ಯೋಜನೆಗಳು ಸಫಲವಾಗಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ಹೊಸಗುಂದ ದೇವಸ್ಥಾನದ ಸುತ್ತಮುತ್ತಲ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಗ್ರಾಮಸ್ಥರು ಸಹಭಾಗಿತ್ವ ನೀಡುತ್ತಿದ್ದಾರೆ ಎಂದು ಹೇಳಿದರು.ತಾಲ್ಲೂಕು ಪಂಚಾಯ್ತಿ ಸದಸ್ಯೆ ಜ್ಯೋತಿ ಮುರಳೀಧರ್, ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಘನಶೀಲಾ, ಉಪಾಧ್ಯಕ್ಷ ಲೋಕೇಶ್, ನಾಗಪ್ಪ, ಕೋವಿ ಪುಟ್ಟಪ್ಪ, ಹೊಳಿಯಪ್ಪ ಇನ್ನಿತರರು ಹಾಜರಿದ್ದರುಕನ್ನಮ್ಮ ಪ್ರಾರ್ಥಿಸಿದರು. ವಿನಾಯಕ್ ಭಟ್ ಸ್ವಾಗತಿಸಿದರು. ಮಹಾಬಲೇಶ್ವರ್ ವಂದಿಸಿ ಸಿಬ್ಬಂದಿಯೇ ಹೊಣೆ: ದೂರು ತಾಲ್ಲೂಕಿನ ತಾಳಗುಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ದೊರಕಿದ್ದ 24:7 ಸೇವಾ ಸೌಲಭ್ಯ ಕಡಿತಗೊಂಡಿರುವುದಕ್ಕೆ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗವೇ ಹೊಣೆಗಾರರಾಗಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್ ದೂರಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೇವಾ ಸೌಲಭ್ಯ ಕಡಿತಗೊಂಡಿರುವುದರಿಂದ ಈ ಭಾಗದ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 12 ಸಾವಿರ ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.ಈ ಹಿಂದೆ ಕಾಗೋಡು ತಿಮ್ಮಪ್ಪ ಅವರ ಕಾಳಜಿಯಿಂದ್ಙ 56 ಲಕ್ಷ ವೆಚ್ಚದಲ್ಲಿ ಹೆರಿಗೆ ವಾರ್ಡ್, ಶಸ್ತ್ರ ಚಿಕಿತ್ಸಾ ಕೊಠಡಿ, 30 ಒಳ ರೋಗಿಗಳಿಗಾಗಿ ವಾರ್ಡ್ ಸೌಲಭ್ಯ ಕಲ್ಪಿಸಲಾಗಿತ್ತು. ಆದಾಗ್ಯೂ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರಕುತ್ತಿಲ್ಲ. ಈಗ ಸರ್ಕಾರದಿಂದ ದೊರೆತ ಸೌಲಭ್ಯವೂ ಹಿಂದಕ್ಕೆ ಹೋಗಿರುವುದು ದುರದೃಷ್ಟಕರ ಸಂಗತಿ ಎಂದಿದ್ದಾರೆ.ಇಲ್ಲಿನ ಸಿಬ್ಬಂದಿಯ ಗ್ರಾಮದಲ್ಲೇ ನೆಲಸದೆ ಬೇರೆ ಕಡೆ ಮನೆ ಮಾಡಿರುವುದು ರೋಗಿಗಳಿಗೆ ಸಕಾಲದಲ್ಲಿ ಸಮರ್ಪಕ ಸೇವೆ ದೊರೆಯದಿರಲು ಕಾರಣವಾಗಿದೆ. ಯಾವುದೇ ರೋಗಿಗಳು ಬಂದರೆ ಸಾಗರದ ಆಸ್ಪತ್ರೆಗೆ ಸಾಗ ಹಾಕಲು ಪ್ರಯತ್ನಿಸುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಹಿಂದಕ್ಕೆ ಹೋಗಿರುವ 24:7 ಸೇವಾ ಸೌಲಭ್ಯ ಮರಳಿ ದೊರೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ಇಲಾಖೆ ವಿರುದ್ಧ ಈ ಭಾಗದ ಜನರೊಂದಿಗೆ ಚಳವಳಿ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry