ಸೋಮವಾರ, ಮೇ 17, 2021
22 °C

ಜವಳಿ ರಫ್ತು: 2.90 ಲಕ್ಷ ಕೋಟಿ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ 5000 ಕೋಟಿ ಅಮೆರಿಕನ್ ಡಾಲರ್(ಈಗಿನ ವಿನಿಮಯ ಲೆಕ್ಕದಲ್ಲಿ ರೂ 2.90 ಲಕ್ಷ ಕೋಟಿ) ಮೌಲ್ಯದ ಜವಳಿ ರಫ್ತು ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರದ ನೂತನ ಜವಳಿ ಖಾತೆ ಸಚಿವ ಕೆ.ಎಸ್.ರಾವ್ ಹೇಳಿದರು.ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಸ್ತುತ ದೇಶದ ಆಮದು  ಹೆಚ್ಚುತ್ತಲೇ ಇದೆ. ರಫ್ತು ಕಡಿಮೆ ಆಗಿದೆ. ಪರಿಣಾಮ ಅಮದು-ರಫ್ತು ನಡುವಿನ ಕೊರತೆ ಅಂತರ(ಕರೆಂಟ್ ಅಕೌಂಟ್ ಡಿಫಿಸಿಟ್-ಸಿಎಡಿ) ಕಳವಳಕಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ರಫ್ತು ಗುರಿ ಹೆಚ್ಚಿಸುವುದರಿಂದ ದೇಶದ `ಆಮದು-ರಫ್ತು ವಹಿವಾಟು ಕೊರತೆ ಅಂತರ' ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.ಸದ್ಯ ದೇಶದ ಜವಳಿ ರಫ್ತು 3400 ಕೋಟಿ ಅಮೆರಿಕನ್ ಡಾಲರ್(ರೂ1.97 ಲಕ್ಷ ಕೋಟಿ)ಗಳಷ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದನ್ನು 5000 ಕೋಟಿ ಡಾಲರ್ ಹೆಚ್ಚಿಸುವುದೇ ನಮ್ಮ ಗುರಿಯಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.