ಜವಾಹರ್ ಯೂನಿಯನ್‌ಗೆ ಜಯ

7

ಜವಾಹರ್ ಯೂನಿಯನ್‌ಗೆ ಜಯ

Published:
Updated:

ಬೆಂಗಳೂರು: ಜವಾಹರ್ ಯೂನಿಯನ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಜವಾಹರ್ ಯೂನಿಯನ್ 4-0 ಗೋಲುಗಳಿಂದ ಮಿನರ್ವ ತಂಡವನ್ನು ಮಣಿಸಿತು. ತಲಾ ಎರಡು ಗೋಲು ಗಳಿಸಿದ ವಿಕ್ರಮ್ (7 ಮತ್ತು 43ನೇ ನಿಮಿಷ) ಹಾಗೂ ರಾಬಿನ್ (20 ಮತ್ತು 45) ತಂಡದ ಗೆಲುವಿಗೆ ಕಾರಣರಾದರು.ಸನ್‌ರೈಸಿಂಗ್ ಮತ್ತು ಸರ್ಕಾರಿ ಮುದ್ರಣಾಲಯ ತಂಡಗಳ ನಡುವಿನ ದಿನದ ಮತ್ತೊಂದು ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು. ಮುರಳಿ 21ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಸರ್ಕಾರಿ ಮುದ್ರಣಾಲಯ ಮೇಲುಗೈ ಪಡೆದಿತ್ತು. ಆದರೆ ಪಂದ್ಯದ 60ನೇ ನಿಮಿಷದಲ್ಲಿ ರಾಜಾ ಅವರು ಸನ್ ರೈಸಿಂಗ್ ತಂಡಕ್ಕೆ ಸಮಬಲದ ಗೋಲು ತಂದಿತ್ತರು.ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಗೋವನ್ಸ್- ಜುಪಿಟರ್ ಮತ್ತು ನ್ಯಾಷನಲ್ಸ್- ಓರಿಯಂಟಲ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry