ಶುಕ್ರವಾರ, ಮೇ 7, 2021
25 °C

ಜವಾಹಿರಿ ಪಾಕ್‌ನಲ್ಲಿದ್ದಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್  (ಎಎಫ್‌ಪಿ): ಅಲ್‌ಖೈದಾ ಸಂಘಟನೆಯ ನೂತನ ಮುಖ್ಯಸ್ಥ ಅಯ್‌ಮನ್ ಅಲ್-ಜವಾಹಿರಿ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ಪೆಂಟಗಾನ್‌ನ ಪ್ರಮುಖ ಅಧಿಕಾರಿಯೊಬ್ಬರು   ಹೇಳಿದ್ದಾರೆ.`ಜವಾಹಿರಿ ಪಾಕಿಸ್ತಾನ ಬಿಟ್ಟು ಇನ್ನೆಲ್ಲಿಯಾದರೂ ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ~ ಎಂದು ಪೆಂಟಗಾನ್ ವಕ್ತಾರ ಜಾರ್ಜ್ ಲಿಟ್ಲ್  ತಿಳಿಸಿದ್ದಾರೆ.

 

9/11 ರ ದಾಳಿಯ 10ನೇ ವರ್ಷದ ಸಂದರ್ಭದಲ್ಲಿ ಜವಾಹಿರಿ ಜಿಹಾದಿ ವೆಬ್‌ಸೈಟ್‌ನಲ್ಲಿ ಒಂದು ಗಂಟೆ ಅವಧಿಯ ವಿಡಿಯೊ ದೃಶ್ಯವನ್ನು ಪ್ರಸಾರ ಮಾಡಿದ ಬೆನ್ನಲ್ಲಿಯೇ ಲಿಟ್ಲ್  ಈ ಹೇಳಿಕೆ ನೀಡಿದ್ದಾರೆ.

 

 ಈಜಿಪ್ಟ್‌ನ ಮಾಜಿ ಉಗ್ರ ಹಾಗೂ ಅಲ್‌ಖೈದಾ ಸಂಘಟನೆಯಲ್ಲಿ ಸುದೀರ್ಘ ಅವಧಿಗೆ ಎರಡನೇ ನಾಯನಾಗಿ ಗುರುತಿಸಿಕೊಂಡಿರುವ ಜವಾಹಿರಿ, ಒಸಾಮಾ ಬಿನ್ ಲಾಡೆನ್ ಹತ್ಯೆ ಬಳಿಕ ಸಂಘಟನೆಯ ಸಾರಥ್ಯವನ್ನು ವಹಿಸಿಕೊಂಡಿದ್ದಾನೆ.  2001 ರ ಸೆಪ್ಟೆಂಬರ್ 11 ರ ದಾಳಿ ಬಳಿಕ ಅಮೆರಿಕವು `ಉಗ್ರರ ವಿರುದ್ಧ ಸಮರ~ ಸಾರಿದ ನಂತರ ಜವಾಹಿರಿ ತಲೆಮರೆಸಿಕೊಂಡಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.