ಜಾಕಿಗಳ ಸಮಾಗಮ

7

ಜಾಕಿಗಳ ಸಮಾಗಮ

Published:
Updated:
ಜಾಕಿಗಳ ಸಮಾಗಮ

ಕನಸೊಂದು ನನಸಾಯಿತು ಎನ್ನುವಂತೆ ನಾಯಕ ನಟ ರಾಜೇಶ್ ಮುಖದಲ್ಲಿ ಹೊಳಪೊಂದು ಕಾಣಿಸುತ್ತಿತ್ತು. ಆತ ಖುಷಿಯಾಗಿದ್ದ.ಹಾಗೆ ನೋಡಿದರೆ ರಾಜೇಶ್‌ನ ಎರಡು ಕನಸುಗಳು ಒಮ್ಮೆಗೇ ನನಸಾಗಿವೆ. ಮೊದಲನೆಯದು ಸಿನಿಮಾದಲ್ಲಿ ಅಭಿನಯಿಸುವ ಕನಸು. ಎರಡನೆಯದು ಪುನೀತ್ ರಾಜಕುಮಾರ್ ಅವರೊಂದಿಗೆ ಒಡನಾಡುವ ಕನಸು. `ಜಂಗಲ್ ಜಾಕಿ~ ಚಿತ್ರ ರಾಜೇಶ್‌ರ ಎರಡು ಕನಸುಗಳನ್ನೂ ಪೂರೈಸಿದೆ.`ಅಣ್ಣಾ ಬಾಂಡ್~ ಚಿತ್ರದ ಶೂಟಿಂಗ್ ಸ್ಥಳದಿಂದ ಬಂದಿದ್ದ ಪುನೀತ್, `ಜಂಗಲ್ ಜಾಕಿ~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಮಾಡಿದರು. ರಾಜೇಶ್‌ಗೆ ಒಳ್ಳೆಯದಾಗಲಿ ಎಂದು ಹಾರೈಸಿದ ಅವರು, `ಸಿನಿಮಾ ಬಗ್ಗೆ ಪ್ರೀತಿಯುಳ್ಳ ಚಿತ್ರತಂಡ ಮಾಡಿರುವ ಈ ಸಿನಿಮಾ ಗೆಲ್ಲಲಿ~ ಎಂದು ಆಶಿಸಿದರು. ನೆಚ್ಚಿನ ನಟನ ಜೊತೆ ಮಾತನಾಡಿದ ಖುಷಿ ರಾಜೇಶ್ ಕಣ್ಣುಗಳಲ್ಲಿ ಮಿನುಗುತ್ತಿತ್ತು.ವಿ.ಮನೋಹರ್ `ಜಂಗಲ್ ಜಾಕಿ~ಯ ಸಂಗೀತ ನಿರ್ದೇಶಕರು. ಎಂದಿನಂತೆ ಮನೋಹರ್ ಅವರದೇ ವಿಶಿಷ್ಟ ಶೈಲಿಯ ಸಂಗೀತ ಚಿತ್ರದಲ್ಲೂ, ಗೀತೆಗಳಲ್ಲೂ ಇದೆಯಂತೆ.ಅಂದಹಾಗೆ, `ಜಂಗಲ್ ಜಾಕಿ~ ಚಿತ್ರದ ನಾಯಕ ರಾಜೇಶ್, ಕಿರುತೆರೆಯ `ಹಳ್ಳಿ ಹೈದ ಪ್ಯಾಟೆಗೆ ಬಂದ~ ರಿಯಾಲಿಟಿ ಶೋನಲ್ಲಿ ಗೆದ್ದವನು. ತನ್ನ ಮುಗ್ಧತೆ, ಸಾಹಸ ಮನೋಭಾವ, ತುಂಟತನದಿಂದ ಕಿರುತೆರೆಯಲ್ಲಿ ಗಮನಸೆಳೆದಿದ್ದ ರಾಜೇಶ, ಈಗ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ. ನಿರ್ದೇಶಕ ರವಿ ಕಡೂರ್‌ಗೆ ರಾಜೇಶ್ ಪ್ರತಿಭೆಯ ಬಗ್ಗೆ ಸಿಕ್ಕಾಪಟ್ಟೆ ವಿಶ್ವಾಸವಿದೆ.ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವುದು ಅವರ ವಿಶ್ವಾಸ.  ಕಿರುತೆರೆ ರಿಯಾಲಿಟಿ ಶೋ ಮೂಲಕವೇ ಬೆಳಕಿಗೆ ಬಂದ ಐಶ್ವರ್ಯಾ ಎನ್ನುವ ಹುಡುಗಿಯನ್ನು ರವಿ ಜಾಕಿಗೆ ಜೋಡಿಯಾಗಿಸಿದ್ದಾರೆ.ಇದೀಗ, `ಜಂಗಲ್ ಜಾಕಿ~ ಚಿತ್ರೀಕರಣ ಮುಗಿದಿದೆ, ತೆರೆ ಕಾಣುವುದಷ್ಟೇ ಬಾಕಿಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry