ಗುರುವಾರ , ಮೇ 13, 2021
39 °C

ಜಾಗತಿಕ ಕಾಫಿ ರಫ್ತು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜುಲೈ ತಿಂಗಳಲ್ಲಿ ಜಾಗತಿಕ ಕಾಫಿ ರಫ್ತು ಪ್ರಮಾಣವು ಶೇ 10ರಷ್ಟು ಕುಸಿದಿದ್ದು, 7.35 ದಶಲಕ್ಷ ಚೀಲಗಳಿಗೆ ಇಳಿಕೆಯಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ ಹೇಳಿದೆ. 60 ಕೆ.ಜಿ ತೂಕದ ಇಂತಹ 8.2 ದಶಲಕ್ಷ ಚೀಲಗಳಷ್ಟು ಕಾಫಿಯನ್ನು ಕಳೆದ ವರ್ಷದ ಇದೇ ಅವಧಿಯಲ್ಲಿ ರಫ್ತು ಮಾಡಲಾಗಿತ್ತು.ಹಡಗುಗಳ ಮೂಲಕ ನಡೆಯುವ ಕಾಫಿ ರಫ್ತು ವಹಿವಾಟು ತಿಂಗಳಿಂದ ತಿಂಗಳಿಗೆ ಶೇ 19ರಷ್ಟು ಇಳಿಕೆಯಾಗಿದೆ. ಜೂನ್ ತಿಂಗಳಲ್ಲಿ 9 ದಶಲಕ್ಷ ಬ್ಯಾಗ್‌ಗಳಷ್ಟು ಕಾಫಿ  ರಫ್ತು ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಇದು 7    ದಶಲಕ್ಷ ಚೀಲಗಳಿಗೆ ಕುಸಿತ ಕಂಡಿದೆ.ಪ್ರಸಕ್ತ ಕಾಫಿ ಇಳುವರಿ ವರ್ಷದ ಮೊದಲ 10 ತಿಂಗಳಲ್ಲಿ (ಅಕ್ಟೋಬರ್‌ನಿಂದ -ಸೆಪ್ಟೆಂಬರ್ ವರೆಗೆ) ರಫ್ತು ಶೇ 14ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು 88 ದಶಲಕ್ಷ ಚೀಲಗಳಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 77 ದಶಲಕ್ಷ ಚೀಲಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು.ದೇಶಿ ರಫ್ತು ಹೆಚ್ಚಳ: ಭಾರತವು ಜುಲೈ ತಿಂಗಳಲ್ಲಿ 4.68 ಲಕ್ಷ ಚೀಲಗಳಷ್ಟು (28,080 ಟನ್) ಕಾಫಿ ರಫ್ತು ಮಾಡಿದೆ.   ಈ ಮೊದಲು ಜುಲೈ ತಿಂಗಳಲ್ಲಿ 28,116 ಟನ್ ಕಾಫಿ  ರಫ್ತು ಅಂದಾಜಿಸಲಾಗಿತ್ತು.ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈ ಅಂತ್ಯದ ವೇಳೆಗೆ ಹಡಗುಗಳ ಮೂಲಕ ನಡೆಯುವ ಜಾಗತಿಕ ಕಾಫಿ ರಫ್ತು ಪ್ರಮಾಣ ಶೇ 13ರಷ್ಟು ಏರಿಕೆ ಕಂಡಿದ್ದು, 104 ದಶಲಕ್ಷ ಚೀಲಗಳಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 92 ದಶಲಕ್ಷ ಚೀಲಗಳಷ್ಟಿತ್ತು.ಜುಲೈ ತಿಂಗಳಿಗೆ ಅಂತ್ಯಗೊಂಡಂತೆ ಕಳೆದ 12 ತಿಂಗಳ ಅವಧಿಯಲ್ಲಿ ಒಟ್ಟು 67 ದಶಲಕ್ಷ ಚೀಲಗಳಷ್ಟು ಅರೇಬಿಕಾ  ಕಾಫಿ  ರಫ್ತು ಮಾಡಲಾಗಿದೆ. ಈ ಅವಧಿಯಲ್ಲಿ ರೋಬಸ್ಟಾ ರಫ್ತು 37 ದಶಲಕ್ಷ ಚೀಲಗಳಿಗೆ ಏರಿಕೆ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.