ಬುಧವಾರ, ಮೇ 25, 2022
25 °C

ಜಾಗತಿಕ ಗೋಧಿ ಉತ್ಪಾದನೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯೂರೋಪ್, ಆಸ್ಟ್ರೇಲಿಯಾ ಮತ್ತು ಕಜಕಿಸ್ತಾನದಲ್ಲಿ ಹೆಚ್ಚಿನ ಇಳುವರಿ ದಾಖಲಾದ ಹಿನ್ನೆಲೆಯಲ್ಲಿ,  2011-12ನೇ ಸಾಲಿನ ಜಾಗತಿಕ ಗೋಧಿ ಉತ್ಪಾದನೆಯನ್ನು ಅಂತರರಾಷ್ಟೀಯ ಧಾನ್ಯ ಮಂಡಳಿ (ಐಜಿಸಿ) ಪರಿಷ್ಕರಿಸಿದೆ.ಕಳೆದ ತಿಂಗಳು `ಐಜಿಸಿ~ ಜಾಗತಿಕ ಗೋಧಿ ಉತ್ಪಾದನೆ 679 ದಶಲಕ್ಷ ಟನ್ ಇರಲಿದೆ ಎಂದು ಹೇಳಿತ್ತು. ಆದರೆ, ಉತ್ತಮ ಇಳುವರಿಯಿಂದ ಈ ಅಂದಾಜು 5 ದಶಲಕ್ಷ ಟನ್‌ಗಳಷ್ಟು ಏರಿಕೆಯಾಗಿದ್ದು, 684 ದಶಲಕ್ಷ ಟನ್‌ಗಳಷ್ಟಾಗಿದೆ.2009-10ನೇ ಸಾಲಿನಲ್ಲಿ 651 ದಶಲಕ್ಷ ಟನ್‌ಗಳಷ್ಟು ಜಾಗತಿಕ ಗೋಧಿ ಉತ್ಪಾದನೆ ದಾಖಲಾಗಿತ್ತು. ಉತ್ಪಾದನೆ ಹೆಚ್ಚಿದಂತೆ, ಗೋಧಿ ಬಳಕೆ ಪ್ರಮಾಣವೂ ಏರಿಕೆಯಾಗಿದೆ. ಕಳೆದ ವರ್ಷ 655 ದಶಲಕ್ಷ ಟನ್ ಇದ್ದ ಜಾಗತಿಕ ಗೋಧಿ ಬಳಕೆ, 2011-12ನೇ ಸಾಲಿನಲ್ಲಿ 677 ದಶಲಕ್ಷ ಟನ್‌ಗಳಷ್ಟಾಗಲಿದೆ ಎಂದು `ಐಜಿಸಿ~ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.