ಜಾಗತಿಕ ಬತ್ತ ಉತ್ಪಾದನೆ ಇಳಿಮುಖ

7

ಜಾಗತಿಕ ಬತ್ತ ಉತ್ಪಾದನೆ ಇಳಿಮುಖ

Published:
Updated:

ನವದೆಹಲಿ(ಪಿಟಿಐ): ಪ್ರಸಕ್ತ ವರ್ಷ ಜಾಗತಿಕ ಬತ್ತದ ಉತ್ಪಾದನೆ ಪ್ರಮಾಣವು ನಿರೀಕ್ಷೆಗಿಂತಲೂ 70 ಲಕ್ಷ ಟನ್‌ಗಳಷ್ಟು ಕಡಿಮೆ ಇರಲಿದೆ ಎಂದು ವಿಶ್ವಸಂಸ್ಥೆಯ `ಆಹಾರ ಮತ್ತು ಕೃಷಿ ಸಂಘಟನೆ~(ಎಫ್‌ಎಒ) ಎಚ್ಚರಿಕೆ ಗಂಟೆ ಭಾರಿಸಿದೆ.ಹೆಚ್ಚು ಬತ್ತ ಬೆಳೆಯುವ ದೇಶಗಳಾದ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಈ ಬಾರಿಯ ಮುಂಗಾರು ಬಹುತೇಕ ಕೈಕೊಟ್ಟಿದೆ. ಇದು ವಿಶ್ವದ ಒಟ್ಟಾರೆ ಬತ್ತ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ಈ ಬಾರಿ ಬತ್ತ ಉತ್ಪಾದನೆ 48.35 ಕೋಟಿ ಟನ್‌ಗೆ ಕುಸಿಯಲಿದೆ ಎಂದು `ಎಫ್‌ಎಒ~ ಅಂದಾಜು ಮಾಡಿದೆ.2012-13ನೇ ಸಾಲಿನಲ್ಲಿ ಜಾಗತಿಕವಾಗಿ 49.05 ಕೋಟಿ ಟನ್ ಬತ್ತ ಉತ್ಪಾದನೆ ಆಗಲಿದೆ ಎಂದು ಜೂನ್‌ನಲ್ಲಿ ಅಂದಾಜು ಮಾಡಲಾಗಿದ್ದಿತು. ಆದರೆ, ಕಳೆದ ನಾಲ್ಕು ತಿಂಗಳ ಪರಿಸ್ಥಿತಿ ಗಮನಿಸಿ ಬತ್ತ ಉತ್ಪಾದನೆ ನಿರೀಕ್ಷೆಯನ್ನು 48.35 ಕೋಟಿ ಟನ್ ಬದಲಿಸಿಕೊಳ್ಳಲಾಗಿದೆ ಎಂದು `ಎಫ್‌ಎಒ~ ಹೇಳಿದೆ.ಭಾರತದಲ್ಲಿ ಹಿಂದಿನ ವರ್ಷಕ್ಕಿಂತ ಈ ವರ್ಷ ಬತ್ತ ಉತ್ಪಾದನೆ ಕನಿಷ್ಠ ಶೇ 6ರಷ್ಟು ಕಡಿಮೆ ಇರಲಿದೆ. ಭಾರತ 2011-12ನೇ ಬೆಳೆ ವರ್ಷದ  ಮುಂಗಾರು ಹಂಗಾಮಿನಲ್ಲಿ 91.53 ಕೋಟಿ ಟನ್ ಬತ್ತ ಬೆಳೆದಿದ್ದಿತು. ಅಲ್ಲದೆ, ಇಡೀ ವರ್ಷದ ಬತ್ತ ಉತ್ಪಾದನೆಯು ಸಾರ್ವಕಾಲಿಕ ದಾಖಲೆ ಪ್ರಮಾಣವಾದ 104.32 ಕೋಟಿ ಟನ್‌ನಷ್ಟು ಇದ್ದಿತು.ಬತ್ತ ಸಂಗ್ರಹ ಆರಂಭ

ರೈತರಿಂದ ಬತ್ತ ಸಂಗ್ರಹಣೆ ಕಾರ್ಯ ಅಕ್ಟೋಬರ್ 1ರಿಂದ ಆರಂಭವಾಗಿದ್ದು,  ಮೊದಲ ವಾರವೇ ಐದು ಲಕ್ಷ ಟನ್ ಸಂಗ್ರಹವಾಗಿದೆ. ಈ ವರ್ಷ 4 ಕೋಟಿ ಟನ್ ಬತ್ತ ಸಂಗ್ರಹಿಸುವ ಗುರಿ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2011-12ನೇ ಮಾರುಕಟ್ಟೆ ವರ್ಷದಲ್ಲಿ(ಅಕ್ಟೋಬರ್-ಸೆಪ್ಟೆಂಬರ್ ಅವಧಿ) ರೈತರಿಂದ 3.50 ಕೋಟಿ ಟನ್ ಬತ್ತ ಸಂಗ್ರಹಿಸುವ ಮೂಲಕ ನಿಗದಿತ ಗುರಿ ಮುಟ್ಟಲಾಗಿದ್ದಿತು.ಈ ವರ್ಷ 4 ಕೋಟಿ ಟನ್ ಬತ್ತ ಸಂಗ್ರಹಿಸುವ ವಿಶ್ವಾಸವಿದೆ. ರಾಜ್ಯಗಳಿಂದ ಬಂದ ಅಂಕಿ-ಅಂಶ ಆಧರಿಸಿಯೇ ಈ ಗುರಿ ನಿಗದಿಪಡಿಸಲಾಗಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಅಮರ್ ಸಿಂಗ್ ಸುದ್ದಿಗಾರರಿಗೆ ಭಾನುವಾರ ತಿಳಿಸಿದ್ದಾರೆ.ಸರ್ಕಾರ ಈ ಮೊದಲೇ ಸಾಮಾನ್ಯ ದರ್ಜೆಯ ಬತ್ತಕ್ಕೆ ಕ್ವಿಂಟಲ್‌ಗೆ ರೂ. 1250 ಮತ್ತು `ಎ~ ದರ್ಜೆ ಬತ್ತಕ್ಕೆ ರೂ. 1280 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದ್ದು, ಅದೇ ಧಾರಣೆಯಲ್ಲಿ ಈಗ ಬತ್ತ ಖರೀದಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry