ಶನಿವಾರ, ಮೇ 15, 2021
24 °C

ಜಾಗತೀಕರಣದಿಂದ ಆಯುರ್ವೇದಕ್ಕೆ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಾಗತೀಕರಣ ಮತ್ತು ಆಧುನಿಕ ವೈದ್ಯ ಪದ್ಧತಿ ಬಳಕೆಯಿಂದಾಗಿ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಆಯುರ್ವೇದ ವೈದ್ಯ ಪದ್ಧತಿ ಮೂಲೆಗುಂಪಾಗುತ್ತಿದೆ ಎಂದು ರಾಜ್ಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶಿವಕುಮಾರ್ ವಿಷಾದಿಸಿದರು.ನಗರದ ಸಹ್ಯಾದ್ರಿ ಕಾಲೇಜಿನ ಸಿಎನ್‌ಆರ್ ರಾವ್ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ `ಜಾಗತೀಕರಣ ಸಂದರ್ಭದಲ್ಲಿ ಆಯುರ್ವೇದ ಔಷಧ~ ಎಂಬ ರಾಷ್ಟ್ರ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದಲ್ಲಿ ಆಯುರ್ವೇದಕ್ಕೆ ತನ್ನದೇ ಆದ ಮಹತ್ವ ಇದೆ. ಆದರೆ, ಇಂದಿನ ಜಾಗತೀಕರಣದಿಂದಾಗಿ ಆಯುರ್ವೇದ ವೈದ್ಯ ಪದ್ಧತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ವಿದೇಶಗಳಲ್ಲಿ ಚಿಕ್ಕ ಗಿಡಮೂಲಿಕೆಗೆ ಸಾಕಷ್ಟು ಪ್ರಚಾರ ನೀಡಿ ಅದರ ಸದುಪಯೋಗವನ್ನು ಅರಿಯಲಾಗುತ್ತದೆ.ಆದರೆ, ಭಾರತದಲ್ಲಿ ಆಯುರ್ವೇದ ಸಂಬಂಧಿತ ಸಾವಿರಾರು ಉಪಯುಕ್ತ ಗಿಡಮೂಲಿಕೆಗಳಿದ್ದರೂ ಅವುಗಳ ಮಹತ್ವ, ಉಪಯೋಗ ಮತ್ತು ಬಳಕೆಗೆ ಸರಿಯಾದ ಪ್ರಚಾರ ಸಿಗುತ್ತಿಲ್ಲ ಎಂದು ನುಡಿದರು.ಮಲೆನಾಡಿನ ಭಾಗದಲ್ಲಿ ಹೆಚ್ಚು ಅಮೂಲ್ಯ ಆಯುರ್ವೇದ ಗಿಡಮೂಲಿಕೆಗಳಿದ್ದು, ಅವುಗಳ ಸಮಗ್ರ ಬಳಕೆ ಮಾಡುವ, ಪರಿಚಯಿಸುವ ನಿಟ್ಟಿನಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಮ್ಮಿಕೊಂಡಿರುವ ಈ ಕಾರ್ಯಾಗಾರ ಶ್ಲಾಘನೀಯ ಎಂದರು.ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ಎ.ಬಾರಿ, ಹಿಮಾಲಯ ಹೆಲ್ತ್‌ಕೇರ್ ಮುಖ್ಯಸ್ಥ ಡಾ.ಪಿ. ರಂಗೇಶ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಆರ್. ಸಿದ್ದರಾಮಪ್ಪ, ಪ್ರೊ.ಮಹದೇವಪ್ಪ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಚ್. ಜಯದೇವಪ್ಪ, ಸಂಚಾಲಕಿ ಡಾ.ಕೆ.ಪಿ. ಲತಾ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.