ಶುಕ್ರವಾರ, ಮೇ 7, 2021
19 °C

ಜಾಗತೀಕರಣದಿಂದ ಎಲ್ಲವೂ ವಾಣಿಜ್ಯಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಾಗತೀಕರಣದ ಪ್ರಭಾವದಿಂದ ಶಿಕ್ಷಣ, ಆರೋಗ್ಯ ಸೇರಿದಂತೆ ಬದುಕಿನ ಅಗತ್ಯಗಳೆಲ್ಲ ವಾಣಿಜ್ಯೀಕರಣಗೊಂಡಿವೆ. ಆದರೆ, ಸಂಸ್ಕೃತಿಯ ಪ್ರಮುಖ ಭಾಗವಾದ ನಾಟಕಗಳು ಇದರಿಂದ ಹೊರತಾಗಿವೆ~ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಹೇಳಿದರು.ರಂಗಚೇತನ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಜನಪರ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಂಗಭೂಮಿಯ ಚಟುವಟಿಕೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ನಾಟಕದೆಡೆಗೆ ಯುವ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಕ್ರಿಯಾಶೀಲತೆಯನ್ನು ಹೆಚ್ಚು ಚುರುಕುಗೊಳಿಸಿದಾಗ ಸಾಹಿತ್ಯ, ಕಾವ್ಯ, ಸಂಗೀತದಂತಹ ಸಂಸ್ಕೃತಿಯು ಸೃಜಿಸುತ್ತದೆ~ ಎಂದು ಹೇಳಿದರು.ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಡಿ.ಕೆ.ಚೌಟ, `ನಗರಗಳಲ್ಲಿ ವಾಹನ ದಟ್ಟಣೆಯಂತಹ ಸಮಸ್ಯೆಗಳು ಕೂಡ ಜನತೆಯನ್ನು ನಾಟಕದಿಂದ ವಿಮುಖವಾಗಿಸುತ್ತಿದೆ. ನಾಟಕಗಳನ್ನು ವೀಕ್ಷಿಸಲು ಸಾಮಾನ್ಯ ಜನರು ಬರುವಂತಾಗಬೇಕು. ನಾಟಕದ ಅಭಿರುಚಿ ಬೆಳೆಯಬೇಕು~ ಎಂದರು.ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅಧ್ಯಕ್ಷ, ನ್ಯಾಯಮೂರ್ತಿ ಎ.ಸಿ.ಕಬ್ಬಿನ್, `ಸಿನಿಮಾ ಮಾಧ್ಯಮದ ಒತ್ತಡದಿಂದ ನಾಟಕಗಳ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಇದರೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಯು ಅಪ್ರಸ್ತುತವಾಗುತ್ತಿರುವುದರಿಂದ ಕನ್ನಡ ನಾಟಕಗಳು ಕಣ್ಮರೆಯಾಗುತ್ತಿವೆ~ ಎಂದು ವಿಷಾದಿಸಿದರು.

ರಂಗಚೇತನ ಕಲಾವಿದರು `ಅರಿವಿನ ಮನೆ~ ನಾಟಕವನ್ನು ಪ್ರದರ್ಶಿಸಿದರು. ಸಂಸ್ಥೆಯ ಅಧ್ಯಕ್ಷ ನಂಜುಂಡಸ್ವಾಮಿ ತೊಟ್ಟವಾಡಿ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.