ಜಾಗತೀಕರಣದಿಂದ ಮೂಲ ಸೆಲೆಗೆ ಹೊಡೆತ

7

ಜಾಗತೀಕರಣದಿಂದ ಮೂಲ ಸೆಲೆಗೆ ಹೊಡೆತ

Published:
Updated:

ಹಾವೇರಿ: `ಜಾಗತೀಕರಣ ಪ್ರಭಾವಳಿ ಯಲ್ಲಿ ನಮ್ಮ ಮೂಲ ನೆಲೆಯ ಸೆಲೆ ಯನ್ನು ಕಳೆದುಕೊಳ್ಳುತ್ತಿದ್ದೆೀವೆ. ಇದು ಹೀಗೆ ಮುಂದುವರೆದರೆ, ನಮ್ಮತನ ವನ್ನು ಸಂಪೂರ್ಣವಾಗಿ ಕಳೆದುಕೊಂಡು ನಮ್ಮ ನಾಡಿನಲ್ಲಿ ನಾವೇ ಪರಕಿಯರಾಗ ಲಿದ್ದೇವೆ~ ಎಂದು ಲೇಖಕಿ ವಾಸಂತಿ ಪ್ರಭಾಕರ ನಾಯಕ ಕಳವಳ ವ್ಯಕ್ತಪಡಿ ಸಿದರು.ನಗರದ ಜಿಲ್ಲಾ ಗುರುಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿ ಆಶ್ರಯ ದಲ್ಲಿ ನಡೆದ ನಾಡಹಬ್ಬ ಕಾರ್ಯಕ್ರಮ ದಲ್ಲಿ `ಕನ್ನಡ ನಾಡು-ನುಡಿ ಸಂಸ್ಕೃತಿ ಚಿಂತನೆ~ ಕುರಿತು ಅವರು ಮಾತನಾಡಿ ದರು. ಕಳೆದು ಹೋದದ್ದನ್ನು ಮರಳಿ ಪಡೆಯುವ ಸಂಸ್ಕೃತಿ ನಿರ್ಮಿಸಲು ತತ್ವ ಜ್ಞಾನದ ಮೂಲ ನೆಲೆಯಾಗಿರುವ ಹಳ್ಳಿಯಡೆಗೆ ನಾವೆಲ್ಲ ತೆರಳಬೇಕು. ಆಗ ಮಾತ್ರ ಜಾಗತೀಕರಣದ ಕಪಿಮುಷ್ಠಿ ಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದರು.ಕನ್ನಡ ಭಾಷೆ ನಿರಂತರವಾಗಿ ಪ್ರಜ್ವ ಲಿಸುವ ಬೆಳಕಾಗಿದೆ. ಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಲಾಗಿದೆ. ಅದನ್ನು ಉಳಿಸಿ, ಬೆಳೆಸಿ ಕೊಂಡು ಹೋಗುವ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದು ಹೇಳಿದರು.ತೆರಿಗೆ ಸಲಹೆಗಾರ ಸಿ.ಎಂ.ಪಟ್ಟಣ ಶೆಟ್ಟಿ ಮಾತನಾಡಿ, ನಾಡಹಬ್ಬಗಳು ನಾಡು-ನುಡಿ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಈ ಹಬ್ಬದಲ್ಲಿ ಪ್ರತಿ ಯೊಬ್ಬ ಕನ್ನಡಿಗ ಭಾಗವಹಿಸಿ ನಮ್ಮ ತನವನ್ನು ಮೆರೆಯಬೇಕಿದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಕರ್ಜಗಿಯ ಗುರುಪಾದ ದೇವರಮಠದ ಶಿವ ಯೋಗಿ ಶ್ರೀಗಳು ಮಾತನಾಡಿ, ಕನ್ನಡ ಸಾಹಿತ್ಯದ ಮೂಲ ಜನಪದ ಸಾಹಿತ್ಯ ವಾಗಿದ್ದು, ಭಾಷೆಯ ಮೇಲೆ ಅಭಿಮಾನ ಇಟ್ಟುಕೊಂಡಾಗ ಅದನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಅಭಿ ಪ್ರಾಯಪಟ್ಟರು.ಇದೇ ಸಂದರ್ಭ ಪತ್ರಕರ್ತ ರಾಜು ನದಾಫ, ಕಲಾವಿದ ವೀರಣ್ಣ ಮಡ್ಲೂರ, ಶಿಕ್ಷಕ ಗದಿಗೆಪ್ಪ ದುರು ಗಣ್ಣನವರ, ಕಾರ್ಮಿಕ ಜಿ.ಎಸ್. ಹಿರೇಮಠ ಹಾಗೂ ಕಲಾವಿದ ವೀರಯ್ಯ ಕಮತರ ಅವರನ್ನು ನಾಡ ಹಬ್ಬ ಸಮಿತಿಯಿಂದ ಸನ್ಮಾನಿಸಲಾ ಯಿತು.ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ರೋಟರಿ ಸದಸ್ಯ ರವಿ ಹಿಂಚಿಗೇರಿ, ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರ ಮಾಳಗಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕ ಘಟಕ ಅಧ್ಯಕ್ಷ ವಿ.ಎಂ.ಪತ್ರಿ ಹಾಗೂ ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಿವಬಸಪ್ಪ ಮುಷ್ಠಿ ಸಮಾ ರಂಭದಲ್ಲಿ ಹಾಜರಿದ್ದರು.

ಮಲ್ಲಿಕಾರ್ಜುನ ಹಿಂಚಿಗೇರಿ ಮತ್ತು ಅಕ್ಕಮಹಾದೇವಿ ಹಾನಗಲ್ ನಿರೂ ಪಿಸಿದರು.ಅಕ್ಕಿ ಅಕ್ರಮಸಾಗಾಟ: ವಿಚಾರಣೆ

ಬ್ಯಾಡಗಿ:
ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನೋರ್ವ ಮಧ್ಯಾಹ್ನದ ಬಿಸಿಯೂಟದ 3ಅಕ್ಕಿ (60 ಕೆ.ಜಿ) ಚೀಲದ ಕೊರೆಗಳನ್ನು ಬೇರೆಡೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಕ್ಕು ಬಿದ್ದ ಘಟನೆ ತಾಲ್ಲೂಕಿನ ಮಲ್ಲೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.ಶಾಲಾವಧಿ ಮುಗಿದ ನಂತರ ಮುಖ್ಯ ಶಿಕ್ಷಕ ಬಿ.ಎಸ್.ಪತ್ರಿ ಬಿಸಿಯೂಟ ಯೋಜನೆಯ ಬೇಳೆಯ ಚೀಲಗಳನ್ನು ತಿರುವಿ ಹಾಕಿ ಅವುಗಳಲ್ಲಿ ಅಕ್ಕಿಯನ್ನು ತುಂಬಿಕೊಂಡು ಸಾಗಿಸುತ್ತಿದ್ದನು ಎನ್ನಲಾಗಿದೆ. ಇದನ್ನು ದೂರದಿಂದಲೇ ಗಮನಿಸುತ್ತಿದ್ದ ಸಾರ್ವಜನಿಕರು ಮಾಲು ಸಮೇತ ಹಿಡಿಯುವಲ್ಲಿ ಯಶಸ್ವಿಯಾದರು.ಮುಖ್ಯ ಶಿಕ್ಷಕ ನೋರ್ವ ಅಕ್ಕಿಯನ್ನು ಕಳ್ಳತನದಲ್ಲಿ ಸಾಗಿಸುವುದನ್ನು ನೋಡಿದರೆ ಇಡೀ ಶಿಕ್ಷಕ ಸಮೂದಾಯ ತಲೆತಗ್ಗಿಸು ವಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಘಟನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಳನ್ನು ಸಂಪರ್ಕಿಸಿದಾಗ ತನಿಖೆ ಕೈಕೊಂಡು ಮುಖ್ಯ ಶಿಕ್ಷಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಹೇಳಿದರು.ಆರೋಪ ನಿರಾಕರಣೆ: ಬಿಸಿ ಯೂಟಕ್ಕೆ ಉಪಯೋಗಿಸಿ ಅಳಿದುಳಿದ ಅಕ್ಕಿ ಕೊರೆಗಳನ್ನು ಅಡಿಗೆಯವರಿಗೆ ಕೊಡಲು ತುಂಬಿಡಲಾಗಿತ್ತು. ಆದರೆ ತಪ್ಪಾಗಿ ಭಾವಿಸಿರುವ ಗ್ರಾಮಸ್ಥರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಿಕ್ಷಕ ಬಿ.ಎಸ್.ಪತ್ರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry