ಜಾಗತೀಕರಣದಿಂದ ಸಂಸ್ಕೃತಿ ಮೇಲೆ ದಾಳಿ

7

ಜಾಗತೀಕರಣದಿಂದ ಸಂಸ್ಕೃತಿ ಮೇಲೆ ದಾಳಿ

Published:
Updated:

ಕೊಪ್ಪಳ: ಜಾಗತೀಕರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಾಗತೀಕರಣದಿಂದ ನಮ್ಮ ಸಂಸ್ಕೃತಿ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಅಭಿಪ್ರಾಯಪಟ್ಟರು.ನಗರದ ಪದಕಿ ಲೇಔಟಿನಲ್ಲಿ ಸೋಮವಾರ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಉದ್ಘಾಟನೆ ಹಾಗೂ ಗಣ್ಯರಿಗೆ ‘ಕರುನಾಡ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಬಹುದೊಡ್ಡ ಸಾಂಸ್ಕೃತಿಕ ಇತಿಹಾಸ ಹೊಂದಿರುವ ನಮಗೆ ಜಾಗತೀಕರಣದ ಪರಿಣಾಮವಾಗಿ ತುಸು ಮಟ್ಟಿಗೆ ಅನುಕೂಲವಾಗಬಹುದು. ಆದರೆ ಅನನುಕೂಲವೆ ಹೆಚ್ಚು ಎಂದು ಅವರು ಪ್ರತಿಪಾದಿಸಿದರು.ನಾಟಕ (ರಂಗಭೂಮಿ) ಅಕಾಡೆಮಿ ಮಾಜಿ ಸದಸ್ಯ ಎಸ್.ವಿ. ಪಾಟೀಲ್ ಗುಂಡೂರು, ಸಂಸ್ಥೆಯ ಅಧ್ಯಕ್ಷ ಹಾಗೂ ಸಾಹಿತಿ ಹೆಚ್.ಎಸ್ ಪಾಟೀಲ್ ಮಾತನಾಡಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಾದ ವಿ.ಕೆ.ಕಮತರ (ಆಡಳಿತ) ಹೇಮಂತಕುಮಾರ್, ಅಂಬಣ್ಣ ಕೊಪ್ಪರದ, ಲಚ್ಚಣ್ಣ ಹಳೆಪೇಟೆ ಕಿನ್ನಾಳ (ಸಂಗೀತ), ನಾಗರಾಜ ದೇಸಾಯಿ (ಸಮಾಜ ಸೇವೆ), ಮಹಾಲಕ್ಷ್ಮೀ ಗಂಗಾವತಿ (ಕಲಾ ಸೇವೆ) ಎಂಬುವವರಿಗೆ ವರಸಿದ್ಧಿವಿನಾಯಕ ಗ್ರಾಮಿಣ, ಶಿಕ್ಷಣಾಭಿವೃದ್ಧಿ ಮತ್ತು ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ‘ಕರುನಾಡ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ, ಸನ್ಮಾನಿಸಲಾಯಿತು.ವೇದಿಕೆ ಮೇಲೆ ಮಧುಸೂದನ ಕಟ್ಟಿ, ಪತ್ರಕರ್ತ ಎನ್.ಎಂ. ದೊಡ್ಡಮನಿ, ವಿಜಯಕುಮಾರ ಪದಕಿ, ಕೆ.ರಾಘವೇಂದ್ರರಾವ್ ಇದ್ದರು. ಪ್ರಾಸ್ತಾವಿಕವಾಗಿ ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿರು. ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೈ.ಬಿ.ಜೂಡಿ ಸ್ವಾಗತಿಸಿದರು. ಕಸಾಪ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ವಂದಿಸಿದರು, ಶಿಕ್ಷಕ ಶ್ರೀನಿವಾಸ ಚಿತ್ರಗಾರ ನಿರೂಪಣೆ ಮಾಡಿದರು. ನಂತರ, ವಾರುಣಿ, ಕವಿತಾ, ಪ್ರೇಮಾ ದೇಸಾಯಿ ಸಂಗೀತ ಕಾರ್ಯಕ್ರಮ ನೆಡಸಿಕೊಟ್ಟರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry