ಬುಧವಾರ, ಜನವರಿ 22, 2020
16 °C

ಜಾಗತೀಕರಣದ ಸವಾಲು ಎದುರಿಸಲು ಸಜ್ಜಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ:`ಜಾಗತೀಕರಣದಿಂದ ನಮಗೆ ಎಷ್ಟು ಲಾಭಗಳಾಗಿವೆಯೋ ಅಷ್ಟೇ ಪ್ರಮಾಣದಲ್ಲಿ ಸವಾಲುಗಳೂ ಎದುರಾಗಿವೆ. ಅನೇಕ ವಿಚಾರಗಳಲ್ಲಿ ನಾವು ಜಾಗತೀಕರಣವನ್ನು ಎದುರಿಸಲು ಇನ್ನೂ ಸಿದ್ಧರಾಗಿಲ್ಲ. ನಾವು ಸನ್ನದ್ಧರಾಗಿ ಸವಾಲುಗಳನ್ನು ಎದುರಿಸುತ್ತ ಹೋದರೆ ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವದ ಶ್ರೇಷ್ಠ ರಾಷ್ಟ್ರ ಎನ್ನಿಸಿಕೊಳ್ಳಲು ಸಾಧ್ಯ~ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಡಿ.ಜಿ. ಕೃಷ್ಣೇಗೌಡ ನುಡಿದರು.ಇಲ್ಲಿನ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ `ಜಾಗತೀಕರಣದ ಸವಾಲುಗಳು~ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.`ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ತಾರತಮ್ಯ ಇದೆ. ಗ್ರಾಮೀಣ ಮತ್ತು ಕಟ್ಟಣದ ಮಟ್ಟದಲ್ಲೇ ಶಿಕ್ಷಣದಲ್ಲಿ ಸಾಕಷ್ಟು ವ್ಯತ್ಯಾಸ ಇದ್ದರೆ, ಪಟ್ಟಣಗಳಲ್ಲೂ ವಿವಿಧ ಶೈಕ್ಷಣಿಕ ಸಂಸ್ಥೆಗಳು ಬೇರೆಬೇರೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕಾಗಿದೆ. ಮುಂದಿನ ತಲೆಮಾರಿನವರು ನಮ್ಮ ಜ್ಞಾನವನ್ನು ವಿದೇಶಗಳಿಗೂ ಒಯ್ದು ಅಲ್ಲಿಯ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಣದತ್ತ ಆಕರ್ಷಿಸುವ ಕಾರ್ಯ ಮಾಡಬೇಕು~ ಎಂದರು.ಜಾಗತೀಕರಣದಿಂದ ಹಲವು ಸಮಸ್ಯೆಗಳು ಉದ್ಭವವಾಗಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ವಾಸ್ತವ ಏನೆಂದರೆ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾವಿನ್ನೂ ಸನ್ನದ್ಧರಾಗಿಲ್ಲ. ಜಾಗತೀಕರಣದಿಂದ ಕೃಷಿ ಸಮುದಾಯಕ್ಕೆ ದೊಡ್ಡ ಹಾನಿಯಾಗಿದೆ.

 

ಮಾರುಕಟ್ಟೆಗಳು ತೆರೆದಿರುವುದರಿಂದ ವಿದೇಶಿ ಧಾನ್ಯಗಳು, ಬಿತ್ತನೆ ಬೀಜಗಳ ಪ್ರವಾಹ ಬಂದಿದೆ. ಇದರಿಂದ ನಮ್ಮ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ರೈತರು ಅನುಸರಿಸುತ್ತಿರುವ ಹಳೆಯ ಕೃಷಿ ಪದ್ಧತಿಯೇ ಕಾರಣ.ಜಾಗತೀಕರಣದ ಸವಾಲುಗಳನ್ನು ಎದುರಿಸಲು ಪೂರಕವಾಗುವಂಥ ಶಿಕ್ಷಣ, ತರಬೇತಿಯನ್ನು ನಮ್ಮ ರೈತರಿಗೆ ಈವರೆಗೆ ನೀಡಿಲ್ಲ. ಅದರಿಂದಾಗಿ ಸಮಸ್ಯೆ ಉಂಟಾಗಿದೆ. ಆಧುನಿಕ ಯುಗದಲ್ಲಿ ಹಳೆಯ ಕತ್ತಿ ಗುರಾಣಿಗಳನ್ನೇ ಹಿಡಿದು ಯುದ್ಧಮಾಡಲಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ~ ಎಂದರು.ನಮ್ಮ ಭಾಷೆ, ಸಂಪ್ರದಾಯಗಳನ್ನು ಉಳಿಸಿಕೊಂಡೇ ಜಾಗತೀಕರಣವನ್ನು ಸ್ವೀಕರಿಸುವುದು ನಿಜವಾದ ಸವಾಲಾಗಿದೆ. ಶ್ರೀಮಂತ ಮಾನವ ಸಂಪನ್ಮೂಲವೇ ಭಾರತದ ಸಾಮರ್ಥ್ಯ. ಇದನ್ನು ಸದ್ಬಳಕೆ ಮಾಡಿಕೊಂಡರೆ ಭಾರತ ಹತ್ತು ವರ್ಷಗಳಲ್ಲಿ ವಿಶ್ವದ ಮುಂಚೂಣಿಯ ರಾಷ್ಟ್ರ ಎನ್ನಿಸಿಕೊಳ್ಳಲು ಸಾಧ್ಯ~ ಎಂದರು.ಸೇಂಟ್ ಜೋಸೆಫ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ದಿನೇಶ ಎಂ. ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಅಮೋಘ್ ಬ್ರಾಡ್‌–ಬ್ಯಾಂಡ್  ವ್ಯವಸ್ಥಾಪಕ ಕೆ.ಪಿ.ಎಸ್.ಪ್ರಮೋದ್ ಅತಿಥಿಯಾಗಿ ಮಾತನಾಡಿದರು.

ಪ್ರತಿಕ್ರಿಯಿಸಿ (+)