ಜಾಗೃತಿಗಾಗಿ ಟಾಂಗಾ ಜಾಥಾ

7

ಜಾಗೃತಿಗಾಗಿ ಟಾಂಗಾ ಜಾಥಾ

Published:
Updated:
ಜಾಗೃತಿಗಾಗಿ ಟಾಂಗಾ ಜಾಥಾ

ವಿಜಾಪುರ: ನಗರದ ತುಂಬೆಲ್ಲಾ ಸೋಮವಾರ ಟಾಂಗಾಗಳದ್ದೇ ದರ್ಬಾರು. ಒಂದು ಕಾಲದಲ್ಲಿ ಇಡೀ ವಿಜಾಪುರ ತುಂಬೆಲ್ಲಾ ಟಾಂಗಾಗಳದ್ದೇ ಸದ್ದು ಕೇಳುತ್ತಿತ್ತು. ಆಟೋಗಳ ಹಾವಳಿ ಮುಂದೆ ಇತ್ತೀಚಿನ ದಿನಗಳಲ್ಲಿ ಮಂಕಾಗಿ ಹೋಗಿದ್ದವು.

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿಗಾಗಿ ಸೋಮವಾರ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.ಇಲ್ಲಿಯ ಕೆಎಸ್‌ಆರ್‌ಟಿಸಿ ವರ್ಕ್‌ಶಾಪ್ ಹತ್ತಿರ ನಗರ ಶಾಸಕ ಅಪ್ಪು ಪಟ್ಟಣಶೆಟ್ಟಿ, ಜಿ.ಪಂ. ಸಿ.ಇ.ಒ ಗುತ್ತಿ ಜಂಬುನಾಥ್ ಅವರು ಟಾಂಗಾದಲ್ಲಿ ಪ್ರತಿಷ್ಠಾಪಿಸಿದ್ದ ಕನ್ನಡಾಂಬೆ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.`ವಿಜಾಪುರಕ್ಕೆ ಸಂಭ್ರಮದ ವರ್ಷವಿದು,  ಈಗ ಅಖಿಲ ಭಾರತ 79 ನೇ ಕನ್ನಡ ಸಾಹಿತ್ಯ ಸಮ್ಮೇಳನದ ತೇರನ್ನೆಯಳೆಯಲು ನಾವು ಸಜ್ಜಾಗಿದ್ದೇವೆ. ಅಕ್ಷರ ಜಾತ್ರೆಯ ಪ್ರಚಾರಾರ್ಥವಾಗಿ ಬದುಕಿನ ಬಂಡಿಯೊಂದಿಗೆ ಆಗಮಿಸಿದ ಎಲ್ಲ ಟಾಂಗಾಗಳ ಮಾಲೀಕರನ್ನು ಅಭಿನಂದಿಸುತ್ತೇನೆ' ಎಂದು ಜಂಬುನಾಥ ಹೇಳಿದರು. ಬಿ.ಡಿ.ಎ. ಅಧ್ಯಕ್ಷ ಭೀಮಾಶಂಕರ ಹದನೂರ, ನಗರ ಸಭೆ ಸದಸ್ಯರಾದ ಆನಂದ ಧುಮಾಳೆ, ಉಮೇಶ ವಂದಾಲ, ಡಿ.ಡಿ.ಪಿ.ಐ. ಬಿ.ಎನ್. ಹಕೀಮ್, ಬಿ.ಇ.ಒ. ರವಿ ಕೊಣ್ಣೂರ, ಎಂ.ವೈ. ಹೊನ್ನಕಸ್ತೂರಿ, ನೌಕರ ಸಂಘ, ಶಿಕ್ಷಕ ಸಂಘದ ಗಣ್ಯರು, ಸಿದ್ದು ಮಲ್ಲಿಕಾರ್ಜುನಮಠ ಇತರರು ಪಾಲ್ಗೊಂಡಿದ್ದರು.ಆಮಂತ್ರಣ:

ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಬೀದರ ಜಿಲ್ಲೆ ಔರಾದ್‌ಗೆ ತೆರಳಿ ಅಲ್ಲಿ ಪ್ರವಚನ ನೀಡುತ್ತಿರುವ ವಿಜಾಪುರ ಜ್ಞಾನಯೋಗಾಶ್ರಮದ  ಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಡಾ ಬಾಬು ನಾಗೂರ, ಅಂಗಡಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry