ಜಾಗೃತಿಯ ರಂಗ ಸಂಚಲನ

7

ಜಾಗೃತಿಯ ರಂಗ ಸಂಚಲನ

Published:
Updated:
ಜಾಗೃತಿಯ ರಂಗ ಸಂಚಲನ

ಜಾಗೃತಿ ಥಿಯೇಟರ್ ತನ್ನ ವಿಭಿನ್ನ ರಂಗ ಪ್ರಯೋಗದ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದೆ. ಜಾಗೃತಿ ಕಲಾ ತಂಡದಲ್ಲಿ ಸೃಜನಶೀಲ ಮನಸ್ಸುಳ್ಳವರ ಒಂದು ಬಳಗವೇ ಇದೆ. ಜಾಗೃತಿ ತಂಡ ಬೆಂಗಳೂರಿನಲ್ಲಿ `ರಂಗ ಋತು~ ನಾಟಕೋತ್ಸವ ನಡೆಸಲಿದೆ.

 

ಅಭಿನಯದ ಮೂಲಕ ನಾಟಕ ಪ್ರಿಯರ ಮನಸೂರೆಗೊಳ್ಳಲು ಬರುತ್ತಿರುವ ಕಲಾವಿದರನ್ನು ಅಷ್ಟೇ ಪ್ರೀತಿಯಿಂದ ಬರಮಾಡಿಕೊಳ್ಳಲು ಸಜ್ಜಾಗಿದೆ ಇಲ್ಲಿನ ಅಭಿಮಾನಿ ವೃಂದ.ಜಾಗೃತಿ ತಂಡ ಡಿಸೆಂಬರ್ 2 ರಿಂದ ಮುಂದಿನ ಜೂನ್ 25ರ ವರೆಗೆ ವಿವಿಧ ನಾಟಕಗಳನ್ನು ಅಭಿನಯಿಸಲಿದೆ. ಇಲ್ಲಿ ಭಾರತ, ಬ್ರಿಟನ್ ಹಾಗೂ ಅಮೆರಿಕದ ಖ್ಯಾತ ನಾಟಕಕಾರರು ಹಾಗೂ ರಂಗಭೂಮಿ ಸಂಸ್ಥೆಗಳು ರಚಿಸಿರುವ ಅಮೋಘವಾದ ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ.7 ತಿಂಗಳು ಸತತವಾಗಿ ನಡೆಯುವ ಈ ನಾಟಕೋತ್ಸವದಲ್ಲಿ ಐತಿಹಾಸಿಕ, ಹಾಸ್ಯ, ಶಾಸ್ತ್ರೀಯ ಹಾಗೂ ಆಧುನಿಕ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಎರಡೂವರೆ ಗಂಟೆಗಳ ಪ್ರತಿ ನಾಟಕ 18 ಪ್ರದರ್ಶನ ಕಾಣಲಿದೆ.ಅರಿಸ್ಟೋಫೇನ್ಸ್ ರಚಿಸಿರುವ ಕೃತಿಗಳಲ್ಲಿ ಲಭ್ಯವಿರುವ ಲಿಸಿಸ್ಟ್ರಾಟ ನಾಟಕವನ್ನು ಜೆಫ್‌ತೆರೆ ನಿರ್ದೇಶಿಸಿದ್ದು ಜಾಗೃತಿ ಕಲಾವಿದರು ಡಿಸೆಂಬರ್ 2ರಿಂದ 18ರ ವರೆಗೆ ಅಭಿನಯಿಸಲಿದ್ದಾರೆ.

 

ಜನವರಿ 13ರಿಂದ 29ರ ವರೆಗೆ ಯುಕೆಯ ರಾಮಿನ್ ಗ್ರೇ ನಿರ್ದೇಶನದ ದಿ ಗೋಲ್ಡನ್ ಡ್ರ್ಯಾಗನ್ ಹಾಸ್ಯನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರುವರಿ 10ರಿಂದ 26 ರವರೆಗೆ ಸಿದ್ಧಾರ್ಥ್ ಕುಮಾರ್ ಅವರು ರಚಿಸಿರುವ ದಿ ಇಂಟರ್ ವ್ಯೆ ನಾಟಕ  ಪ್ರದರ್ಶನಗೊಳ್ಳಲಿದೆ.ಅರುಂಧತಿ ರಾಜಾ ನಿರ್ದೇಶಿಸಿರುವ ಗಿರೀಶ್ ಕಾರ್ನಾಡ್ ಅವರ ದಿ ಡ್ರಿಮ್ಸ ಆಫ್ ಟಿಪ್ಪು ಸುಲ್ತಾನ್ ನಾಟಕ ಮಾರ್ಚ್ 9ರಿಂದ 25ರ ವರೆಗೆ ಪ್ರದರ್ಶನಗೊಳ್ಳಲಿದೆ. ಅನಿತಾ ನಾಯರ್ ಅವರ ಎ ಟ್ವಿಸ್ಟ್ ಆಫ್ ಲೈಮ್ ನಾಟಕ ಮೇ 4ರಿಂದ 20ರ ವರೆಗೆ ಪ್ರದರ್ಶನಗೊಳ್ಳುತ್ತದೆ.ಡೊನಾಲ್ಡ್ ಮಾರ್ಗುಲೈಸ್ ಅವರ ಶಿಪ್‌ರೆಕ್ಡ್ ನಾಟಕವನ್ನು ಅಮೆರಿಕದ ಟೆಕ್ಸನ್‌ನ ದಿ ರೋಗ್ ಥಿಯೇಟರ್ ಕಲಾವಿದರು ಅಭಿನಯಿಸಲಿದ್ದಾರೆ. ಇದು ಜೂನ್  1ರಿಂದ 17ರ ವರೆಗೆ ಪ್ರದರ್ಶನಗೊಳ್ಳಲಿದೆ.ಜಾಗೃತಿ ಎಂದರೇ ಸಂಸ್ಕೃತದಲ್ಲಿ ತಿಳಿವಳಿಕೆ, ಜ್ಞಾನೋದಯ ಎಂಬರ್ಥವಿದೆ. ಅರುಂಧತಿ ಮತ್ತು ಜಗದೀಶ್ ರಾಜಾ ಅವರು ರಂಗಭೂಮಿಗೆ ಕಾಲಿಟ್ಟ ಪ್ರಥಮ ಸಂದರ್ಭದಲ್ಲಿ ಕಲೆಯ ಆರಾಧನೆಗೆಂದೇ ಮೀಸಲಾದ ಒಂದು ಸಂಸ್ಥೆಯನ್ನು ಕಟ್ಟಬೇಕು ಎಂದು ಕನಸು ಕಂಡಿದ್ದರು.

ಅವರ ಅಂದಿನ ಕಲ್ಪನೆಯ ಕೂಸು ಜಾಗೃತಿ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ. ಇದರ ಮುಖ್ಯ ಉದ್ದೇಶ ಕಲೆಯನ್ನು ಬೆಳೆಸುವುದು. ಅಭಿನಯದ ಜತೆಗೆ ವಿಶೇಷ ಕಾರ್ಯಾಗಾರ, ಉಪನ್ಯಾಸಗಳನ್ನು ಸಹ ಹಮ್ಮಿಕೊಂಡು ಬರುತ್ತಿದೆ.ವೈಟ್‌ಫೀಲ್ಡ್‌ನಲ್ಲಿರುವ ಥಿಯೇಟರ್ 200 ಆಸನ ವ್ಯವಸ್ಥೆ ಹೊಂದಿದ್ದು, ನಾಟಕ ಅಭಿನಯಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಹೊಂದಿದೆ. ಟಿಕೆಟ್ ಕಾಯ್ದಿರಿಸಲು ಮತ್ತು ಹೆಚ್ಚಿನ ಮಾಹಿತಿಗೆ: 78294 50191.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry