ಬುಧವಾರ, ಜೂನ್ 16, 2021
22 °C

ಜಾಗೃತಿ; ಅತ್ಯುತ್ತಮ ಘೋಷವಾಕ್ಯಕ್ಕೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ ಮತದಾರರು ಮುಕ್ತವಾಗಿ, ನಿರ್ಭೀತಿ­ಯಿಂದ  ಮತದಾನ ಪ್ರಕ್ರಿಯೆ­ಯಲ್ಲಿ  ಭಾಗವಹಿಸುವಂತೆ ಜಾಗೃತಿ ಮೂಡಿಸುವ ಅತ್ಯುತ್ತಮ ಘೋಷವಾಕ್ಯ ಪ್ರಕಟಿಸುವ ಕನ್ನಡದ ದಿನ ಪತ್ರಿಕೆಗಳಿಗೆ ಜಿಲ್ಲಾಡಳಿತದ ವತಿಯಿಂದ ₨ 10 ಪ್ರಥಮ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ತಿಳಿಸಿದ್ದಾರೆ.ಇದೇ 28 ರಿಂದ ಏಪ್ರಿಲ್‌ 16ರ­ವರೆಗೆ ಘೋಷವಾಕ್ಯಗಳು ಆಕರ್ಷಕ­ವಾಗಿ ಪ್ರಕಟಗೊಂಡು ಮತದಾರರನ್ನು ಸೆಳೆಯುವಂತಿರಬೇಕು. ಘೋಷವಾಕ್ಯ­ಗಳು ಮುಕ್ತ, ನ್ಯಾಯಸಮ್ಮತ ಹಾಗೂ ನೈತಿಕ ಮತದಾನ ಕುರಿತು ಅರ್ಥೈಸು­ವಂತೆ ಇರಬೇಕು ಎಂದು ಅವರು ತಿಳಿಸಿದ್ದಾರೆ.ಪ್ರತಿನಿತ್ಯ ವಿಭಿನ್ನ ರೀತಿಯ ಘೋಷವಾಕ್ಯ ಪ್ರಕಟಗೊಳ್ಳಬೇಕು. ಅತ್ಯುತ್ತಮ ಘೋಷವಾಕ್ಯಗಳನ್ನು ಪ್ರಕಟಿ­ಸುವ ಪತ್ರಿಕೆಗೆ ಪ್ರಥಮ ಬಹುಮಾನ­ವಾಗಿ ₨ 10, ದ್ವಿತೀಯ ಬಹುಮಾನ­ವಾಗಿ ₨ 5, ತೃತೀಯ ಬಹುಮಾನ ₨ 2500 ಹಾಗೂ  5 ಪತ್ರಿಕೆಗಳಿಗೆ ಸಮಾಧಾನಕರ ಬಹುಮಾನವಾಗಿ ₨ 1000 ನಗದು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಘೋಷವಾಕ್ಯಗಳ ಸೃಜನಶೀಲತೆ, ಪ್ರಕಟಗೊಂಡ ಮಾದರಿ, ಸಂಖ್ಯೆ, ವಿಭಿನ್ನತೆಯನ್ನು ಪರಿಶೀಲಿಸಲು ಸಮಿತಿ­ಯನ್ನು ರಚಿಸಿ, ಸಮಿತಿ ನೀಡಿದ ವರದಿ ಆಧರಿಸಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಬಹುಮಾನ ಘೋಷಿಸಿ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.