ಗುರುವಾರ , ನವೆಂಬರ್ 14, 2019
18 °C

`ಜಾಗೃತ ಮತದಾರರಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ'

Published:
Updated:

ಉಜಿರೆ: ದೇಶದ ಅಭಿವೃದ್ಧಿಗೆ ಸುಭದ್ರ ಸರ್ಕಾರ ಇರಬೇಕು. ಜಾಗೃತ, ಪ್ರಬುದ್ಧ ಮತದಾರರಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಎಂದು ಬೆಳ್ತಂಗಡಿ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಎಚ್ ಮೋಹನ್ ಹೇಳಿದರು.ಬೆಳ್ತಂಗಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಪೊಳ್ಳು ಆಶ್ವಾಸನೆಗಳಿಗೆ ಬಲಿಯಾಗದೆ ಪ್ರಾಮಾಣಿಕ ಹಾಗೂ  ಸಮರ್ಥ ಅಭ್ಯರ್ಥಿಗೆ ಮತ ಹಾಕಬೇಕು. ಪ್ರತಿಯೊಬ್ಬರು ಮತವನ್ನು ಚಲಾಯಿಸಬೇಕು ಎಂದು ಅವರು ಸಲಹೆ ನೀಡಿದರು.ಸಂಘದ ಗೌರವಾಧ್ಯಕ್ಷ ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್, ಸುನಿಲ್ ಶೆಣೈ, ಶ್ರೀಕಾಂತ ಗೋರೆ, ಗೋಪಾಲಕೃಷ್ಣ ಕಾಂಚೋಡು, ಶ್ರೀರಾಮ ಭಟ್, ವಿಕ್ಟರ್ ಕ್ರಾಸ್ತಾ ಮತ್ತು ಮಹಮ್ಮದ್ ರಫಿ  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)