ಸೋಮವಾರ, ಆಗಸ್ಟ್ 10, 2020
25 °C

ಜಾಣರ ಪೆಟ್ಟಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಣರ ಪೆಟ್ಟಿಗೆ

ಮನೆಯಲ್ಲಿರುವ ಟೀವಿ ಪೆಟ್ಟಿಗೆ

ಮಾಯಾಜಾಲದ ಅದ್ಭುತ ಕೊಡುಗೆ

ಜಗಳವೇ ಇಲ್ಲ ಮಕ್ಕಳ ನಡುವೆ

ಕೊರತೆಯೇ ಇಲ್ಲ ಮನರಂಜನೆಗೆ

ವಿಧ ವಿಧ ವಿಷಯ ತಿಳಿಸುವ ಟೀವಿಗೆ

ಯಾಕನ್ನುವರೋ ಮೂರ್ಖರ ಪೆಟ್ಟಿಗೆ?

ಜಗವನೇ ಅರಿಯಲು ಸಾಧನವಾಗಿಹ

ಮಕ್ಕಳಿಗಿದು ಜಾಣರ ಪೆಟ್ಟಿಗೆ

ಕಾರ್ಟೂನ್ ಕಾಮಿಕ್ಸ್ ಎಲ್ಲಾ ಉಂಟು

ಸುದ್ದಿ - ಕ್ರಿಕೆಟು ಎಲ್ಲ ಇರುವುದು

ದೇಶ ವಿದೇಶಗಳ ಸ್ವಾರಸ್ಯ ಸಾರ

ಮನೆಯಲಿ ಕುಳಿತೇ ನೋಡಬಹುದು

ವಟವಟಗುಟ್ಟುವ ಅಜ್ಜಿಯ ಬಾಯಿಗೆ

ಬೀಗವ ಹಾಕಿದೆ

ಸುಮ್ಮನೆ ತಿರುಗುವ ಅಣ್ಣನ ಕಾಲಿಗೆ

ಬೇಡಿಯ ತೊಡಿಸಿದೆ

ಅಮ್ಮನ ಹರಟೆಗೆ ತಮ್ಮನ ತರಲೆಗೆ

ಸಮಯವೇ ಸಿಗುತ್ತಿಲ್ಲ

ಮನೆಗೆಲಸ ಮಾಡುತಲಿರುವರು

ಕುಂಯ್ಞಿ ಕುಂಯ್ಞಿ ಎನ್ನದೆ ಅವರೆಲ್ಲ

ಟೀವಿ ನೋಡುತ ಹೋಂವರ್ಕ್

ಮಾಡುವುದು ಯಾರಿಗೂ ಒಳಿತಲ್ಲ

ಜ್ಞಾನಾರ್ಜನೆಗೆ ದಿನದಲ್ಲೊಂದಿಷ್ಟು

ಟೀವಿ ನೋಡಿದರೆ ತಪ್ಪೇನಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.