ಶುಕ್ರವಾರ, ಜೂನ್ 18, 2021
23 °C

ಜಾತಿಪದ್ಧತಿ ಬೆಳವಣಿಗೆಗೆ ಹುನ್ನಾರ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ರಾಜಕೀಯ ಇಚ್ಛಾಶಕ್ತಿ, ದಲಿತೇತರರ ಸಹೃದಯ ಮನಸ್ಸು ಮತ್ತು ಎಚ್ಚೆತ್ತ ದಲಿತ ಧ್ವನಿಗಳು ಈ ಮೂರು ಒಗ್ಗೂಡಿದಾಗ ಮಾತ್ರ ದಲಿತ ವಿಮೋಚನೆ ಸಾಧ್ಯ~ ಎಂದು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.ಮಧು ಪ್ರಕಾಶನ ನಗರದ ಸ್ಪೂರ್ತಿಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಚ್.ವಿ.ಹನುಮಂತು ಅವರ `ಮರಳಿ ಬಂದ ಭಾಗ್ಯ~ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಾತಿ ಪದ್ದತಿಯನ್ನು ಹೋಗಲಾಡಿಸಲು ಬುದ್ಧ, ಬಸವ, ಜ್ಯೋತಿ ಬಾ ಪುಲೆ, ಗಾಂಧಿ, ಅಂಬೇಡ್ಕರ್ ಮೊದಲಾದವರು ಹೋರಾಡಿದರೂ ನಿರೀಕ್ಷಿತ ಫಲ ದೊರಕಲಿಲ್ಲ. ಈಗ ಇದು ವಿಸ್ತಾರವಾಗಿ ಹರಡಿದೆ. ಈ ವಿಷ ವೃಕ್ಷವನ್ನು ಬೇರು ಸಹಿತ ಕಿತ್ತೊಗೆಯಬೇಕು. ಆದರೆ ಈ ವಿಷವೃಕ್ಷದ ಬೇರುಗಳಿಗೆ ನೀರು-ಗೊಬ್ಬರ ಹಾಕಿ ಪೋಷಿಸುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದಲ್ಲಿ ಬಂಡವಾಳಗಾರರು, ರಾಜಕಾರಣಿಗಳು, ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ದಲಿತರು ಜನಪದ ಸಾಹಿತ್ಯದ ಮೂಲ ಕರ್ತೃಗಳು. ತಮಗೆ ಸಂತೋಷವಾದಾಗ, ದುಃಖವಾದಾಗ ಜನಪದ ಸಾಹಿತ್ಯವನ್ನು ರಚಿಸಿದ್ದಾರೆ. ಆದರೆ ಇಂದು ಕೆಲವರು ಜನಪದ ಸಾಹಿತ್ಯವನ್ನು ಸಂಗ್ರಹಿಸುವುದರ ಮೂಲಕ ಅದನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅಂಬೇಡ್ಕರ್ ನೆಟ್ಟು ಬೆಳೆಸಿದ ಬೀಜಗಳು.

 

ವೈದಿಕರು ಜನಭಾಷೆಯ ವಿರೋಧಿಗಳು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಸೃಷ್ಠಿಯಾಗದೇ ಹೋಗಿದ್ದರೆ ಕನ್ನಡ ಭಾಷೆ ಈ ವೇಳೆಗೆ ಅವನತಿಯನ್ನು ಹೊಂದುತ್ತಿತ್ತು. ಮಠಾಧಿಪತಿಗಳು ಪ್ರಯತ್ನ ಪಟ್ಟರೆ ಕನ್ನಡ ಭಾಷೆಗೆ ಬಂದಿರುವ ಆಪತ್ತನ್ನು ತಡೆಯಬಹುದು ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಮರಿದೇವರು ಕೃತಿ ಬಿಡುಗಡೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಜಿ.ಶಿವಣ್ಣ ಕೃತಿ ಕುರಿತು ಮಾತನಾಡಿದರು. ಅಂಬೇಡ್ಕರ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷ ಶಿವಶಂಕರ್ ಮಾತನಾಡಿದರು.  ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರಾ.ಸಿ.ದೇವರಾಜು, ಕಾಂಗ್ರೆಸ್ ಮುಖಂಡ ಪಾರ್ಥಸಾರಥಿ, ಪ್ರಕಾಶಕ ಡಾ.ಅಂಕನಹಳ್ಳಿ ಪಾರ್ಥ, ಗಾಯಕ ವಿನಯ್‌ಕುಮಾರ್, ಅರುಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.